ಎರಡನೇ ಡೋಸ್ ಪಡೆದ 9 ತಿಂಗಳ ಬಳಿಕ ಬೂಸ್ಟರ್ ಡೋಸ್: ಮಾರ್ಗಸೂಚಿ ಪ್ರಕಟ

Prasthutha|

ನವದೆಹಲಿ: ಜನವರಿ 10ರಿಂದ ಭಾರತದಲ್ಲಿ ಆರಂಭವಾಗಲಿರುವ ಬೂಸ್ಟರ್ ಡೋಸ್’ನ್ನು ಪಡೆಯುವ ಮಾರ್ಗಸೂಚಿಯನ್ನ ಕೇಂದ್ರ ಸರ್ಕಾರ ಸೋಮವಾರ ಪ್ರಕಟಿಸಿದೆ. ವೈದ್ಯಕೀಯ ಸಿಬ್ಬಂದಿ, ಮುಂಚೂಣಿ ಆರೋಗ್ಯ ಕಾರ್ಯಕರ್ತರು, ಹಾಗೂ ಆರೋಗ್ಯ ಸಮಸ್ಯೆ ಇರುವ 60 ವರ್ಷ ಮೇಲ್ಪಟ್ಟವರು ಕೋವಿಡ್-19 ಲಸಿಕೆಯ ಎರಡನೇ ಡೋಸ್ ಪಡೆದ 9 ತಿಂಗಳ ಬಳಿಕ  (39 ವಾರ) ಬೂಸ್ಟರ್ ಡೋಸ್ ಅರ್ಹರಾಗಿರುತ್ತಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ.

- Advertisement -

CoWIN ಪೋರ್ಟಲ್’ನಲ್ಲಿ ನೋಂದಣಿ ಮತ್ತು ಸೇವೆ ಕಾಯ್ದಿರಿಸುವಿಕೆ ಲಭ್ಯವಿರಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾರ್ಗಸೂಚಿಯಲ್ಲಿ ಸ್ಪಷ್ಪಪಡಿಸಿದೆ. 3 ಕೋಟಿ ಆರೋಗ್ಯ ಕಾರ್ಯಕರ್ತರು ಮತ್ತು ಮುಂಚೂಣಿ ಕಾರ್ಯಕರ್ತರು ಮತ್ತು 60 ವರ್ಷಕ್ಕೂ ಮೇಲ್ಪಟ್ಟ ಇತರೆ ಆರೋಗ್ಯ ಸಮಸ್ಯೆಗೊಳಗಾದ  ಸುಮಾರು 10-15 ಕೋಟಿ ಫಲಾನುಭವಿಗಳಿಗೆ ಲಸಿಕೆ ನೀಡಲು ಸರ್ಕಾರ ಸಿದ್ಧತೆ ಆರಂಭಿಸಿದೆ. ಸರ್ಕಾರದ ಕೋವಿಡ್-19 ಲಸಿಕಾ ಕೇಂದ್ರಗಳಲ್ಲಿ  ಉಚಿತ ಲಸಿಕೆ ಪಡೆಯಬಹುದಾಗಿದೆ ಎಂದು ಸರ್ಕಾರ ತಿಳಿಸಿದೆ.

15-18 ವರ್ಷದ ಮಕ್ಕಳಿಗೆ ‘ಕೊವ್ಯಾಕ್ಸಿನ್’ ಮಾತ್ರ

- Advertisement -

ಜನವರಿ 3ರಿಂದ 15 -18 ವರ್ಷದ ಮಕ್ಕಳಿಗೆ ಲಸಿಕಾ ಅಭಿಯಾನ ಪ್ರಾರಂಭವಾಗಲಿದ್ದು, ಈ ವಯಸ್ಸಿನ ಮಕ್ಕಳಿಗೆ ಹೈದ್ರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆಯು ಉತ್ಪಾದಿಸುತ್ತಿರುವ ಕೊವ್ಯಾಕ್ಸಿನ್ ಲಸಿಕೆಯ ಎರಡು ಡೋಸ್ ಮಾತ್ರ ಲಭ್ಯವಿರುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.

ನೋಂದಣಿ ವಿಧಾನ

15 ರಿಂದ 18 ವರ್ಷದೊಳಗಿನ ಮಕ್ಕಳು ಕೊರೊನಾವೈರಸ್ ಲಸಿಕೆಗಾಗಿ ಕೊವಿನ್ ಅಪ್ಲಿಕೇಷನ್ ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಜನವರಿ 1ರಿಂದ ವಿದ್ಯಾರ್ಥಿಗಳು ತಮ್ಮ ಶಾಲಾ ಗುರುತಿನ ಚೀಟಿಯನ್ನು ಬಳಸಿಕೊಂಡು ಲಸಿಕೆಗಾಗಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಹೇಳಿದೆ.

CoWIN ಪೋರ್ಟಲ್’ನಲ್ಲಿ ಮಕ್ಕಳಿಗೆ ಕೊವಿಡ್-19 ಲಸಿಕೆ ವಿತರಿಸುವ ಉದ್ದೇಶದಿಂದ ಪ್ರತ್ಯೇಕ ವಿಭಾಗವನ್ನು ರಚಿಸಲಾಗಿದೆ. ಈ ವಿಭಾಗದಲ್ಲಿ ವಿದ್ಯಾರ್ಥಿಗಳು ತಮ್ಮ ಶಾಲಾ ಗುರುತಿನ ಚೀಟಿಯನ್ನು ಬಳಸಿಕೊಂಡು ಲಸಿಕೆಗಾಗಿ ಹೆಸರು ನೋಂದಾಯಿಸಿಕೊಳ್ಳಬಹುದು,” ಎಂದು ಕೊವಿನ್ ಅಪ್ಲಿಕೇಷನ್ ಮುಖ್ಯಸ್ಥ ಆರ್ ಎಸ್ ಶರ್ಮಾ ತಿಳಿಸಿದ್ದಾರೆ.



Join Whatsapp