ಫೆ.1ರಂದು ಕೇಂದ್ರ ಬಜೆಟ್ ಮಂಡನೆ

Prasthutha|

ಹೊಸದಿಲ್ಲಿ: ಕೇಂದ್ರ ಬಜೆಟ್‌ ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಫೆ. 1ರಂದು ಮಂಡಿಸಲಿದ್ದಾರೆ.

- Advertisement -

2023ರ ಬಜೆಟ್‌ ಅಧಿವೇಶನ ಜ. 31ರಂದು ಆರಂಭವಾಗುವ ಸಾಧ್ಯತೆಗಳಿದ್ದು, ಎ. 6ರಂದು ಮುಕ್ತಾಯಗೊಳ್ಳಲಿದೆ. ಬಜೆಟ್‌ ಅಧಿವೇಶನದ ಮೊದಲ ದಿನ ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಾಗುವುದು. ಅಧಿವೇಶನದ ಮೊದಲ ಭಾಗದ ಕಲಾಪಗಳು ಫೆ. 10ರ ವರೆಗೆ ನಡೆಯಲಿವೆ ಎಂದು ಉನ್ನತ ಮೂಲಗಳು ತಿಳಿಸಿವೆ.

ರಾಷ್ಟ್ರಪತಿ ದ್ರೌಪದಿ ಮುರ್ಮು ಸಂಸತ್ತನ್ನು ಉದ್ದೇಶಿಸಿ ತಮ್ಮ ಚೊಚ್ಚಲ ಭಾಷಣ ಮಾಡಲಿದ್ದಾರೆ. ಬಜೆಟ್‌ ಅಧಿವೇಶನದ ದ್ವಿತೀಯ ಭಾಗ ಮಾರ್ಚ್‌ 6ರಂದು ಆರಂಭವಾಗಿ ಎ. 6ರಂದು ಮುಕ್ತಾಯ ಗೊಳ್ಳಲಿದೆ.

Join Whatsapp