ಮಕ್ಕಳ ಕಳ್ಳರೆಂದು ಭಾವಿಸಿ ಭೂಗರ್ಭ ಅಧಿಕಾರಿಗಳ ಮೇಲೆ ಹಲ್ಲೆ

Prasthutha|

ವಿಜಯಪುರ: ಮಕ್ಕಳ ಕಳ್ಳರೆಂದು ಶಂಕಿಸಿ ಭೂಗರ್ಭ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಹಿರೇಬೇವನೂರ ತೋಟದಲ್ಲಿ ನಡೆದಿದೆ.

- Advertisement -

ಗ್ರಾಮದ ಸುತ್ತಮುತ್ತ ಖನಿಜದ ನಿಕ್ಷೇಪವಿದೆ ಎಂಬ ಮಾಹಿತಿ ಆಧರಿಸಿ ಬೆಂಗಳೂರಿನಿಂದ ಸಹಾಯಕ ಭೂ ಇಲಾಖೆ ಅಧಿಕಾರಿ ದಿನೋಮನ್‌ ತಮ್ಮ ಸಹಾಯಕರೊಂದಿಗೆ ಇಂಡಿಗೆ ಆಗಮಿಸಿದ್ದರು.ಪಟ್ಟಣದ ಇಬ್ಬರು ಪರಿಚಿತ ಯುವಕ ರೊಂದಿಗೆ ಖಾಸಗಿ ವಾಹನದಲ್ಲಿ ಗ್ರಾಮಕ್ಕೆ ತೆರಳಿದ್ದರು.

ಈ ವೇಳೆ ಗ್ರಾಮಸ್ಥರು ನೀವು ಯಾರೆಂದು ಅಧಿಕಾರಿಗಳ ಜೊತೆ ಪ್ರಶ್ನಿಸಿದ್ದರು. ಐಡಿ ಕಾರ್ಡ್‌, ಇಲಾಖೆಯ ಪತ್ರ ತೋರಿಸುವಂತೆ ಹೇಳಿದ್ದರು. ಆದರೆ ಅಧಿಕಾರಿಗಳು ಸಮರ್ಪಕವಾಗಿ ಸ್ಪಂದಿಸದ ಕಾರಣ ಸಂಶಯಗೊಂಡ ಗ್ರಾಮಸ್ಥರು ಹಲ್ಲೆ ನಡೆಸಿದ್ದಾರೆ. ಬಳಿಕ ಪೊಲೀಸರು ಮಧ್ಯಪ್ರವೇಶಿಸಿ ವಿಚಾರವನ್ನು ತಿಳಿಗೊಳಿಸಿದ್ದಾರೆ.