ಡಾ.‌ಸುಮತಿ ಹೆಗ್ಡೆಯವರ ನೇತೃತ್ವದಲ್ಲಿ ಮಂಗಳಮುಖಿಯರು ಜೆಡಿಎಸ್ ಸೇರ್ಪಡೆ

Prasthutha|

ಮಂಗಳೂರು: ಇಲ್ಲಿನ ಮಲ್ಲಿಕಟ್ಟೆಯ ಸುಮಾ ಸದನ ಸಭಾಂಗಣದಲ್ಲಿ ಮಂಗಳೂರಿನ ಹಲವು ಮಂಗಳಮುಖಿಯರು ಜೆಡಿಎಸ್ ನಾಯಕಿ ಡಾ.‌ಸುಮತಿ ಎಸ್ ಹೆಗ್ಡೆಯವರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭ ಜೆಡಿಎಸ್ ಪಕ್ಷದ ನಾಯಕಿಯರಾದ ನಿಷಾ, ಭಾರತೀ ಪುಷ್ಪರಾಜನ್, ಮಂಗಳೂರು ದಕ್ಷಿಣ ಕ್ಷೇತ್ರದ ಮಹಿಳಾ ಘಟಕದ ಅಧ್ಯಕ್ಷೆ ವಿಣಾ ಶೆಟ್ಟಿ ಕವಿತಾ, ಆಶಾ ಸುಜ್ನೇಷ್, ಶಾರದಾ ಶೆಟ್ಟೆ, ಸುನೀತಾ, ಬಸೀರಾ, ಜೆಡಿಎಸ್ ಮಂಗಳೂರು ದಕ್ಷಿಣ ಪದಾಧಿಕಾರಿಗಳಾದ ಅಲ್ತಾಫ್ ತುಂಬೆ , ಸಲೀಂ ಜಾವೇದ್ , ದಿನೇಶ್ ಪಯಿಸ್, ಜಯರಾಂ, ಮನೋಜ್ ಕುಮಾರ್ ಹಾಗೂ ಹಲವು ಕಾರ್ಯಕರ್ತರು ಉಪಸ್ಥಿತರಿದ್ದರು.


‌ಪಕ್ಷದ ತತ್ವ ಸಿದ್ಧಾಂತವನ್ನು ಒಪ್ಪಿಕೊಂಡು ಬಂದ ಕಾರ್ಯಕರ್ತೆಯರಿಗೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಜೆಡಿಎಸ್ ಅಭ್ಯರ್ಥಿ ಡಾ.‌ಸುಮತಿ ಎಸ್ ಹೆಗ್ಡೆ ಪಕ್ಷದ ಧ್ವಜ ನೀಡಿ ಆತ್ಮೀಯವಾಗಿ ಸ್ವಾಗತಿಸಿದರು. ಪ್ರಿಯಾ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು. ವಿನ್ಸೆಂಟ್ ಪೆರೇರಾ ಧನ್ಯವಾದಗೈದರು.

- Advertisement -