ಮಹಿಳಾ ಟೆಸ್ಟ್ ಕ್ರಿಕೆಟ್ : ಅಂಪೈರ್ ರನ್ನೇ ಅಚ್ಚರಿಯಲ್ಲಿ ಕೆಡವಿದ ಭಾರತದ ಪೂನಂ ರಾವತ್ ರ ಕ್ರೀಡಾ ಸ್ಪೂರ್ತಿ

Prasthutha|

ಆಸ್ಟ್ರೇಲಿಯಾದ ವಿರುದ್ಧ ನಡೆಯುತ್ತಿರುವ ಮಹಿಳಾ ಟೆಸ್ಟ್ ನಲ್ಲಿ ಭಾರತೀಯ ಮಹಿಳಾ ತಂಡದ ಪೂನಂ ರಾವತ್ ಅವರ ಕ್ರೀಡಾ ಸ್ಪೂರ್ತಿ ಖುದ್ದು ಅಂಪೈರ್ ಅವರನ್ನೇ ಅಚ್ಚರಿಗೆ ಕೆಡವಿದೆ. ಮೊದಲ ಇನ್ನಿಂಗ್ಸ್ ನಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದ ಭಾರತ ಎರಡು ವಿಕೆಟ್ ಗಳನ್ನು ಕಳೆದುಕೊಂಡು 217 ರನ್ ಗಳಿಸಿ ಸುಸ್ಥಿತಿಯಲ್ಲಿತ್ತು. ಈ ವೇಳೆ ಆಸೀಸ್ ಎಡಗೈ ಸ್ಪಿನ್ನರ್ ಮೋಲಿನಕ್ಸ್ ಅವರ ಎಸೆತವೊಂದು ಪೂನಂ ರಾವತ್ ಅವರನ್ನು ವಂಚಿಸಿ ವಿಕೆಟ್ ಕೀಪರ್ ಹೀಲಿ ಅವರ ಕೈಸೇರಿತ್ತು. ಆಸೀಸ್ ಆಟಗಾರ್ತಿಯರು ಔಟ್ ಗಾಗಿ ಮನವಿ ಸಲ್ಲಿಸಿದರೂ ಅಂಪೈರ್ ನಾಟ್ ಔಟ್ ಎಂದು ತೀರ್ಪಿತ್ತಿದ್ದರು. ಆಗ ಕ್ರೀಡಾ ಸ್ಪೂರ್ತಿ ಮೆರೆದ ಪೂನಂ, ಕೂಡಲೇ ಗ್ಲೌಸ್ ಕಳಚುತ್ತಾ ಪೆವಿಲಿಯನ್ ಕಡೆಗೆ ಮುಖ ಮಾಡಿದ್ದಾರೆ. ಅವರ ಈ ನಡೆ ಅಂಪೈರ್ ಮಾತ್ರವಲ್ಲ ಬೌಲರ್ ಮೋಲಿನಕ್ಸ್ ಸೇರಿದಂತೆ ಇಡೀ ಆಸೀಸ್ ಆಟಗಾರ್ತಿಯರನ್ನು ಅಚ್ಚರಿಗೆ ಕೆಡವಿತ್ತು.

- Advertisement -

ಭಾರತ ಮತ್ತು ಆಸೀಸ್ ವನಿತೆಯರ ನಡುವೆ ಪಿಂಕ್ ಬಾಲ್ ಟೆಸ್ಟ್ ನಡೆಯುತ್ತಿದೆ. ಟಾಸ್ ಗೆದ್ದಿದ್ದ ಆಸೀಸ್ ಭಾರತಕ್ಕೆ ಬ್ಯಾಟಿಂಗ್ ನಡೆಸಲು ಆಹ್ವಾನಿಸಿತ್ತು. ಎರಡನೇ ದಿನವಾದ ಇಂದು ಭಾರತದ ಆರಂಭಿಕ ಆಟಗಾರ್ತಿ  ಸ್ಮೃತಿ ಮಂದಾನ  ಅವರ ಶತಕದ ನೆರವಿನಿಂದ ಲಂಚ್ ವಿರಾಮದ ವೇಳೆಗೆ ಮೂರು ವಿಕೆಟ್ ಕಳೆದುಕೊಂಡು 231 ರನ್ ಗಳಿಸಿ ಸುಸ್ಥಿತಿಯಲ್ಲಿದೆ.

Join Whatsapp