ಕೊಪ್ಪಳ ವಿಮೆನ್ ಇಂಡಿಯ ಮೂವ್ಮೆಂಟ್ ಜಿಲ್ಲಾಧ್ಯಕ್ಷೆಯಾಗಿ ಉಮ್ಮೇ ರುಮಾನ ಆಯ್ಕೆ

Prasthutha|

ಕೊಪ್ಪಳ: ವಿಮೆನ್ ಇಂಡಿಯಾ ಮೂವ್ಮೆಂಟ್ ಕೊಪ್ಪಳ ಜಿಲ್ಲಾ ಪ್ರತಿನಿಧಿ ಸಭೆಯು ದಿನಾಂಕ 12 ಆಗಸ್ಟ್ 2023 ರಂದು ಕೊಪ್ಪಳದ ಕುಷ್ಟಗಿಯಲ್ಲಿ ನಡೆಯಿತು.

- Advertisement -

ಕಾರ್ಯಕ್ರಮವನ್ನು ಎಸ್ ಡಿ ಪಿ ಐ ಜಿಲ್ಲಾ ಉಪಾಧ್ಯಕ್ಷರಾದ ಝಹೀರ್ ಅಬ್ಬಾಸ್ ರವರು ಉದ್ಘಾಟಿಸಿ ರಾಜಕೀಯ ಕ್ಷೇತ್ರದಲ್ಲಿ ಮಹಿಳೆಯರ ಅಗತ್ಯತೆ ಹಾಗೂ ಪ್ರಸಕ್ತ ಸನ್ನಿವೇಶದಲ್ಲಿ ಮಹಿಳೆಯರ ಸ್ಥಿತಿಗತಿಗಳ ಬಗ್ಗೆ ಸವಿವರವಾಗಿ ಮಾತನಾಡಿದರು.

ವಿಮೆನ್ ಇಂಡಿಯಾ ಮೂವ್ಮೆಂಟ್ ರಾಜ್ಯ ಪ್ರಧಾನ ಕಾರ್ಯದರ್ಶಿ ನಸ್ರಿಯಾ ಬೆಳ್ಳಾರೆಯವರು ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ನೂತನ  ಜಿಲ್ಲಾಧ್ಯಕ್ಷೆಯಾಗಿ ಉಮ್ಮೇ ರುಮಾನ ಗಂಗಾವತಿ, ಜಿಲ್ಲಾ ಉಪಾಧ್ಯಕ್ಷೆಯಾಗಿ ಸದಾಫ್ ಕುಷ್ಟಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಶಾಹಿನ್, ಕಾರ್ಯದರ್ಶಿಯಾಗಿ ಝೈನಬ್, ಕೋಶಾಧಿಕಾರಿಯಾಗಿ ತಬಸ್ಸುಮ್ ಪರ್ವೀನ್ ಹಾಗೂ ಜಿಲ್ಲಾ ಸಮಿತಿ ಸದಸ್ಯರುಗಳಾಗಿ ಶಾಹಿನ್ ಬೇಗಂ, ಶಮಾ, ರಜಿಯಾ ಸುಲ್ತಾನ, ಶಾಹಿಸ್ತರವರು ಆಯ್ಕೆಯಾಗಿರುತ್ತಾರೆ.

- Advertisement -

ಎಸ್ ಡಿ ಪಿ ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೂಸುಫ್ ಮೋದಿರವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ನೂತನವಾಗಿ ಆಯ್ಕೆಯಾದ ಜಿಲ್ಲಾಧ್ಯಕ್ಷೆ ಉಮ್ಮೇ ರುಮಾನ ರವರು ಸಭೆಯನ್ನುದ್ದೇಶಿಸಿ ಮಾತನಾಡಿದರು ಹಾಗೂ ನೂತನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಹಿನ್ ರವರು ಧನ್ಯವಾದಗೈದರು.

 ಸಭೆಯಲ್ಲಿ ವಿಮೆನ್ ಇಂಡಿಯಾ ಮೂವ್ಮೆಂಟ್ ‘ಅನ್ಯಾಯದ ವಿರುದ್ಧ ಒಂದಾಗಿ ಸೆಟೆದು ನಿಲ್ಲಿರಿ’ ರಾಷ್ಟ್ರೀಯ ಅಭಿಯಾನದ ಪೋಸ್ಟರ್ ಬಿಡುಗಡೆ ಮಾಡಲಾಯಿತು.

Join Whatsapp