ಹುಲಿ ದಾಳಿಗೆ ಬಲಿಯಾದ ಕಾರ್ಮಿಕನ ಕುಟುಂಬಕ್ಕೆ ಉಮೇಶ್ ಕತ್ತಿ ಸಾಂತ್ವನ

Prasthutha|

ಮಡಿಕೇರಿ: ದಕ್ಷಿಣ ಕೊಡಗಿನಲ್ಲಿ ಹುಲಿ ಕಾಟ ಮುಂದುವರರೆದಿದ್ದು, ಸುತ್ತಮುತ್ತಲಿನ ಜನರು ಹುಲಿ ಕಾಟದಿಂದ ಭಯ ಭೀತರಾಗಿದ್ದಾರೆ. ಈ ನಡುವೆ ಅಧಿಕಾರಿಗಳು ಕೂಡ ಹುಲಿ ಹಿಡಿಯುವುದಲ್ಲಿ ವಿಳಂಬ ದೋರಣೆ ತೋರುತ್ತಿದ್ದಾರೆ.

- Advertisement -

ಇನ್ನೂ ಸ್ಥಳಕ್ಕೆ ತೆರೆಳಿದ  ಅರಣ್ಯ ಸಚಿವ ಉಮೇಶ್ ಕತ್ತಿ ವಿ.ಬಾಡಗ ಸಮೀಪದ ತೋಟವೊಂದರಲ್ಲಿ ಇತ್ತೀಚೆಗೆ ಹುಲಿ ದಾಳಿಗೆ ಬಲಿಯಾದ ಕಾರ್ಮಿಕನ ಕುಟುಂಬಕ್ಕೆ ಸಾಂತ್ವನ ಹೇಳಿ  5.50 ಲಕ್ಷ ರೂ.ಗಳ ಪರಿಹಾರದ ಚೆಕ್ ವಿತರಿಸಿದರು.

ದಕ್ಷಿಣ ಕೊಡಗಿನ ವಿ.ಬಾಡಗ ಗ್ರಾಮದ ಒಂದನೇ ರುದ್ರಗುಪ್ಪೆ ಗ್ರಾಮದ ತೋಟವೊಂದರಲ್ಲಿ ಕಾಳುಮೆಣಸು ಕೊಯ್ಯಲು ತೆರಳಿದ್ದ ಗದ್ದೆಮನೆ ನಿವಾಸಿ ಗಣೇಶ್ ಹುಲಿ ದಾಳಿಗೆ ಬಲಿಯಾಗಿದ್ದರು.

- Advertisement -

ಶುಕ್ರವಾರ ಅತ್ತೂರು ಬಳಿಯ ಅವರ ನಿವಾಸಕ್ಕೆ ಭೇಟಿ ನೀಡಿದ ಅರಣ್ಯ ಸಚಿವ ಉಮೇಶ್ ಕತ್ತಿ ಅವರು ಕುಟುಂಬದವರಿಗೆ ಸಾಂತ್ವನ ಹೇಳಿದರು. ಇದೇ ಸಂದರ್ಭ ಮೃತರ ಕುಟುಂಬದವರಿಗೆ 5.50ಲಕ್ಷ ರೂ.ಗಳ ಪರಿಹಾರದ ಚೆಕ್ ಹಸ್ತಾಂತರಿಸಿದರು.

ಬಳಿಕ ಅರಣ್ಯ ಸಚಿವರು ನಾಗರಹೊಳೆ ರಾಷ್ಟ್ರೀಯ ಉದ್ಯಾನವನ ಸರಹದ್ದಿನ ಸುಳುಗೋಡುವಿಗೆ ತೆರಳಿ ಆನೆ ಹಾವಳಿ ತಡೆಗೆ ರೈಲ್ವೇ ಕಂಬಿಯಿಂದ ನಿರ್ಮಿಸಲಾದ ಬೇಲಿಯನ್ನು ಪರಿಶಿಲಿಸಿದರು.

Join Whatsapp