ಬೆಂಗಳೂರು: ನಗರ ಮತ್ತು ಗ್ರಾಮೀಣ ಭಾಗದ ಆಸ್ತಿಗಳಿಗೆ ಯುಎಲ್ ಪಿ ಐ ಎನ್ ನೀಡುವ ಯೋಜನೆ ಮೂರು ವರ್ಷಗಳಲ್ಲಿ ಇದು ಪೂರ್ಣಗೊಳ್ಳಲಿದೆ ಎಂದು ಕಂದಾಯ ಸಚಿವ ಆರ್.ಅಶೋಕ ಭರವಸೆ ನೀಡಲಿದ್ದಾರೆ.
ವಿಧಾನ ಪರಿಷತ್ ನ ಪ್ರಶ್ನೋತ್ತರ ಕಲಾಪದಲ್ಲಿಂದು ಕೆ.ಎ.ತಿಪ್ಪೇಸ್ವಾಮಿ ಅವರು, ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ಆಧಾರ್ ಮಾದರಿಯಲ್ಲಿ ಕೃಷಿ ಜಮೀನು, ಗ್ರಾಮೀಣ ಮತ್ತು ನಗರ ಆಸ್ತಿಗಳಿಗೆ ಸರ್ವೇ ನಂಬರ್/ ಆಸ್ತಿಗಳಿಗೆ ಯೂನಿಕ್ ಲ್ಯಾಮಡ್ ಪಾರ್ಸೇಲ್ ಐಡೆಂಟಿಫಿಕೇಷನ್ ನಂಬರ್ (ಯುಎಲ್ ಪಿ ಐ ಎನ್) ನೀಡಲು ಉದ್ದೇಶಿಸಲಾಗಿದೆ. ರಾಜ್ಯದಲ್ಲಿ 100 ತಾಲ್ಲೂಕುಗಳಲ್ಲಿ ಪ್ರಾಯೋಗಿಕವಾಗಿ ಜಾರಿಯಾಗಿದೆ ಎಂದು ಹೇಳಿದರು.
ದಾಖಲಾತಿಗಳ ಡಿಜಿಟಲೀಕರಣಕ್ಕೆ ತಾಲ್ಲೂಕು ಜಿಲ್ಲಾಧಿಕಾರಿಗಳ ಕಚೇರಿಗೆ 317 ಸ್ಕ್ಯಾನರ್ ಪೂರೈಸಲು ಟೆಂಡರ್ ಕರೆಯಲಾಗಿದೆ. ಕೇಂದ್ರ ಸರ್ಕಾರದ ನೆರವಿನಲ್ಲಿ ಡ್ರೋಣ್ ಬಳಸಿ ಮರು ಸರ್ವೇ ನಡೆಸಲಾಗುತ್ತಿದೆ. ಪ್ರತಿ ಆಸ್ತಿಗೂ ಜಿಪಿಆರ್ ಎಸ್ ಗುರುತಿನ ದಾಖಲೆ ಸೃಷ್ಟಿಸಲಾಗುತ್ತಿದೆ ಎಂದರು.
ಯೋಜನೆಯನ್ನು ಆರಂಭದಲ್ಲಿ ರಾಮನಗರ, ತುಮಕೂರು, ಬೆಳಗಾವಿ, ಹಾಸನ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜಾರಿಗೆ ತರಲಾಗಿದೆ. ರಾಮನಗರಲ್ಲಿ ಸರ್ವೇ ಪೂರ್ಣಗೊಂಡಿದೆ. ಬೆಂಗಳೂರಿನ 198 ವರ್ಡ್ ನಲ್ಲಿ ಸರ್ವೇ ಮುಗಿದಿದೆ. 62 ವಾರ್ಡ್ ಗಳಲ್ಲಿ ಸ್ಥಳ ಪರಿಶೀನೆ ಮುಗಿದಿದು, 109 ವಾರ್ಡ್ ಗಳ ಡೇಟಾ ಪರಿಶೀಲನೆಗೆ ಸ್ವೀಕೃತಿಯಾಗುತ್ತಿದ್ದಂತೆ 3,50,530 ಆಸ್ತಿಗಳ ಸಮೀಕ್ಷೆ ಕೈಗೊಳ್ಳಲಾಗಿದೆ. 92,187 ಕರಡು ನಗರಾಸ್ಥಿ ಮಾಲೀಕತ್ವದ ಆಸ್ತಿ ದಾಖಲೆಗಳನ್ನು ಮಾಲೀಕರಿಗೆ ವಿತರಿಸಲಾಗಿದೆ. ತುಮಕೂರಿನಲ್ಲಿ ಕೆಲಸ ಪ್ರಗತಿಯಲ್ಲಿದೆ ಎಂದರು.
ದಾಖಲಾತಿಗಳು ಸಿದ್ಧ ಪಡಿಸುವಾಗ ಲೋಪದೋಷಗಳಾಗಿದ್ದರೆ, ಅದನ್ನು ಗ್ರಾಮ ಮಟ್ಟದಲ್ಲೇ ಪರಿಶೀಲನೆ ಮಾಡಲಾಗುತ್ತಿದೆ. ಆ ಹಂತದಲ್ಲಿ ಇತ್ಯರ್ಥವಾಗದಿದ್ದರೆ ಮೇಲ್ಮನಬಿಗೆ ಎರಡು ಕೆಎಟಿ ಪೀಠ ಸ್ಥಾಪಿಸಲಾಗಿದೆ. ಮತ್ತೊಂದು ಪ್ರಾಧಿಕಾರ ರಚನೆ ಮಾಡಿದರೆ ಗೊಂದಲ ಸೃಷ್ಟಿಯಾಗುವುದರಿಂದ ಅದರ ಅಗತ್ಯ ಇಲ್ಲ ಎಂದರು.
ಈ ಯೋಜನೆಗೆ ರಾಜ್ಯ ಸರ್ಕಾರ 10 ಕೋಟಿ ಬಿಡುಗಡೆ ಮಾಡಿದೆ, ಕೇಂದ್ರ ಸರ್ಕಾರ ಈಗಾಗಲೇ24 ಕೋಟಿ ನೀಡಿದೆ. ಮತ್ತಷ್ಟು ಅನುದಾನ ನೀಡಲು ಮನವಿ ಸಲ್ಲಿಸಲಾಗುವುದು ಎಂದರು.