ಬಿರುಗಾಳಿಗೆ ಸಿಲುಕಿ ಸಮುದ್ರಪಾಲು । ಸತತ 30 ಗಂಟೆಗಳ ಹೋರಾಟ । ಮಲ್ಪೆ ದಡ ತಲುಪಿದ ಉಳ್ಳಾಲದ ಮೀನುಗಾರ

Prasthutha: September 8, 2020

ಮಂಗಳೂರು : ಮೀನುಗಾರಿಕೆಗೆ ತೆರಳಿದ್ದ ವೇಳೆ ಭಯಾನಕ ಬಿರುಗಾಳಿಗೆ ಸಿಲುಕಿ, ನಾಪತ್ತೆಯಾಗಿದ್ದ ಉಳ್ಳಾಲದ ಮೀನುಗಾರ ಸುನಿಲ್ ಕುವೆಲ್ಲೊ ಮಲ್ಪೆಯಲ್ಲಿ ಪತ್ತೆಯಾಗಿದ್ದಾರೆ. ಭಾನುವಾರ ಮಧ್ಯರಾತ್ರಿ ಕುವೆಲ್ಲೊ ಸೇರಿದಂತೆ 29 ಮಂದಿ ಮೀನುಗಾರಿಕೆಗೆ ತೆರಳಿದ್ದರು. ಆದರೆ, ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೊಡಗಿದ್ದಾಗ, ಬಿರುಗಾಳಿ ಬಂದು ದುರ್ಘಟನೆ ಸಂಭವಿಸಿತ್ತು.

ಉಳಿದವರು ಹೇಗೋ ಪ್ರಾಣಾಪಾಯದಿಂದ ಪಾರಾಗಿದ್ದರು. ಆದರೆ, ಕುವೆಲ್ಲೊ ಬಗ್ಗೆ ಮಾಹಿತಿ ಸಿಕ್ಕಿರಲಿಲ್ಲ. ನಿನ್ನೆ ಮಧ್ಯಾಹ್ನ ಈ ಬೋಟ್ ನ ಬೆಲ್ಟ್ ತುಂಡಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕುವೆಲ್ಲೊ ಶೋಧ ಕಾರ್ಯ ಮುಂದುವರೆದಿತ್ತು. ಆದರೆ, ಇಂದು ಕುವೆಲ್ಲೊ ಮಲ್ಪೆಯಲ್ಲಿ ಸಿಕ್ಕಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ.

ರಾತ್ರಿ ವರೆಗೂ ಬಲೆಯನ್ನು ಬಿಡಿಸುವ ಕಾರ್ಯದಲ್ಲಿ ನಿರತರಾಗಿದ್ದೆವು. ಮಧ್ಯರಾತ್ರಿ ಗಾಳಿ ಮಳೆ ಹೆಚ್ಚಾಗಿ ಬೋಟ್ ಗೆ ಕಟ್ಟಿದ್ದ ಪಾತಿ ಹಗ್ಗ ತುಂಡಾಗಿ ಸಮುದ್ರ ಪಾಲಾಯಿತು. ಬಲೆ ಎಳೆಯಲೆಂದು ಪಾತಿಯಲ್ಲಿ ಕುಳಿತಿದ್ದೆ. ಆದರೆ, ತಪ್ಪಿಸಿಕೊಳ್ಳಲಾಗಲಿಲ್ಲ. ಸತತ 30 ಗಂಟೆ ಸಮುದ್ರದಲ್ಲಿ ಏಕಾಂಗಿಯಾಗಿ ಹೋರಾಡಿ ಪ್ರಾಣಾಪಾಯದಿಂದ ಪಾರಾಗಿದ್ದೇನೆ ಎಂದು ಕುವೆಲ್ಲೊ ಹೇಳಿರುವುದಾಗಿ ವರದಿಯಾಗಿದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!