ವಿದ್ಯುತ್ ತಂತಿ ತಗುಲಿ ಉಳ್ಳಾಲದ ಯುವಕ ಮೃತ್ಯು

Prasthutha|

ಉಳ್ಳಾಲ: ವಿದ್ಯುತ್ ತಂತಿ ತಗುಲಿ ಯುವಕನೋರ್ವ ಮೃತ್ಯುಗೀಡಾದ ಘಟನೆ ಉಳ್ಳಾಲ ಸಮೀಪದ ಜಲಾಲ್ ಬಾಗ್ ಬಳಿ ಶುಕ್ರವಾರ ಸಂಜೆ ನಡೆದಿದೆ. ಮೃತ ಯುವಕನನ್ನು ಸ್ಥಳೀಯ ನಿವಾಸಿ ಮುಹಮ್ಮದ್ ಇಲ್ಯಾಸ್(21) ಎಂದು ಗುರುತಿಸಲಾಗಿದೆ.

- Advertisement -

ಮೃತ ಇಲ್ಯಾಸ್ ಮನೆ ಸಮೀಪದಲ್ಲೇ ಕಂಪೌಂಡು ಬಳಿಯಿರುವ ಮಾವಿನಮರದಲ್ಲಿ ಮಾವು ಕೀಳಲು ಮರಹತ್ತಿದ್ದಾನೆ, ಈ ವೇಳೆ ಯುವಕನಿಗೆ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ಮೆಸ್ಕಾಂ ಇಲಾಖೆಯೇ ಯುವಕನ ಸಾವಿಗೆ ನೇರ ಕಾರಣ ಎಂದು ಆರೋಪಿಸಿರುವ ಸ್ಥಳೀಯರು, ಮಾವಿನ ಮರದ ಮೇಲೆ ವಿದ್ಯುತ್ ತಂತಿ ಹಾದುಹೋಗಿದ್ದರೂ ಅದನ್ನು ತೆರವುಗೊಳಿಸಲು ಇಲಾಖೆ ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Join Whatsapp