ಏಕನಾಥ್ ಶಿಂಧೆ ಪೋಸ್ಟರ್ ಮೇಲೆ ಕಪ್ಪು ಮಸಿ, ಮೊಟ್ಟೆ ಎಸೆದ ಶಿವಸೇನೆ ಕಾರ್ಯಕರ್ತರು

Prasthutha|

ನಾಸಿಕ್ : ಮಹಾರಾಷ್ಟ್ರದಲ್ಲಿ ಶಿವಸೇನೆಯ ಬಂಡಾಯ ಶಾಸಕರ ವಿರುದ್ಧ ಪ್ರತಿಭಟನೆಗಳು ಪ್ರಾರಂಭವಾಗಿದ್ದು, ನಾಸಿಕ್ ನಗರದಲ್ಲಿ ಶಿವಸೇನೆ ಕಾರ್ಯಕರ್ತರು ಶುಕ್ರವಾರ ಏಕನಾಥ್ ಶಿಂಧೆ ಅವರ ಪೋಸ್ಟರ್ ಮೇಲೆ ಕಪ್ಪು ಮಸಿ ಎರಚಿ, ಮೊಟ್ಟೆಗಳನ್ನು ಎಸೆದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -


ಶಿವಸೇನಾ ಕಾರ್ಯಕರ್ತರು ಶಿಂಧೆ ವಿರುದ್ಧ ದೇಶದ್ರೋಹಿ ಮತ್ತು ಮುರ್ದಾಬಾದ್ ಘೋಷಣೆಗಳನ್ನು ಕೂಗಿ, ಪೋಸ್ಟರ್ ಗಳಿಗೆ ಮೊಟ್ಟೆಯನ್ನು ಎಸೆದು ಪ್ರತಿಭಟನೆಯನ್ನು ನಡೆಸುತ್ತಿರುವ ವೀಡಿಯೋ ವೈರಲ್ ಆಗಿದೆ.ಇದೇ ರೀತಿಯ ಪ್ರದರ್ಶನಗಳ ವರದಿಗಳು ಮುಂಬೈನ ಉಪನಗರಗಳಿಂದ ಕೇಳಿ ಬರುತ್ತಿದ್ದು, ಥಾಣೆಯಲ್ಲಿ ಶಿಂಧೆ ಅವರನ್ನು ಸ್ವಾಗತಿಸಲು ಬಿಜೆಪಿ ಹಾಕಿದ್ದ ಪೋಸ್ಟರ್ ಅನ್ನು ಕೆಲವು ಶಿವಸೇನಾ ಕಾರ್ಯಕರ್ತರು ತೆಗೆದುಹಾಕಿದ್ದಾರೆ.

ಏತನ್ಮಧ್ಯೆ, ಶಿಂಧೆ ಬಣವು ಗುವಾಹಟಿಯಲ್ಲಿ ಶಿವಸೇನೆಯ 38 ಶಾಸಕರ ಬೆಂಬಲದ ಫೋಟೋಗಳು ಮತ್ತು ವೀಡಿಯೊಗಳನ್ನು ಬಿಡುಗಡೆ ಮಾಡಿದೆ. ಇದಕ್ಕೂ ಮುನ್ನ ಶಿಂಧೆ ಅವರು ಶಿವಸೇನೆಯ 50 ಶಾಸಕರ ಬೆಂಬಲ ಕೋರಿದ್ದರು.

Join Whatsapp