ಉಳ್ಳಾಲ ಬೋಟ್ ದುರಂತ | ಇಬ್ಬರ ಮೃತದೇಹ ಪತ್ತೆ | ಇನ್ನೂ ನಾಲ್ವರಿಗಾಗಿ ಹುಡುಕಾಟ

Prasthutha|

ಮಂಗಳೂರು : ಉಲ್ಲಾಳ ಸಮುದ್ರ ತೀರದಲ್ಲಿ ಸೋಮವಾರ ಸಂಜೆ ನಡೆದಿದ್ದ ಬೋಟ್ ದುರಂತದಲ್ಲಿ ನಾಪತ್ತೆಯಾಗಿದ್ದ ಮೀನುಗಾರರಲ್ಲಿ ಇಬ್ಬರ ಮೃತದೇಹ ಪತ್ತೆಯಾಗಿದೆ. ದುರಂತದಲ್ಲಿ ಆರು ಮಂದಿ ನಾಪತ್ತೆಯಾಗಿದ್ದರೆಂದು ವರದಿಯಾಗಿತ್ತು.

ಬೋಳಾರದ ಪ್ರಶಾಂತ್ ಎಂಬವರಿಗೆ ಸೇರಿದ ‘ಶ್ರೀ ರಕ್ಷಾ’ ಎಂಬ ಪರ್ಸಿನ್ ಬೋಟ್ ಸೋಮವಾರ ಸಂಜೆ ಮುಳುಗಡೆಯಾಗಿದ್ದು, 16 ಮಂದಿ ಮೀನುಗಾರರು ಪಾರಾಗಿದ್ದಾರೆ. ನಾಪತ್ತೆಯಾಗಿದ್ದವರ ಪೈಕಿ ಪಾಂಡುರಂಗ ಸುವರ್ಣ (58) ಮತ್ತು ಚಿಂತನ್ (21) ಎಂಬವ ಮೃತದೇಹ ಪತ್ತೆಯಾಗಿದೆ.

- Advertisement -

ನಾಪತ್ತೆಯಾದ ಉಳಿದ ನಾಲ್ವರು ಮೀನುಗಾರರ ಹೆಸರು ಪ್ರೀತಂ, ಝೀಯಾವುಲ್ಲಾ, ಅನ್ಸಾರ್, ಹಸೈನಾರ್ ಎಂದು ತಿಳಿದು ಬಂದಿದೆ. ನಾಪತ್ತೆಯಾದವರ ಪತ್ತೆಗೆ ಕಾರ್ಯಾಚರಣೆ ಮುಂದುವರಿದಿದೆ.  

- Advertisement -