December 1, 2020

ರೈತರ ಹೋರಾಟಕ್ಕೆ ಬೆಂಬಲಕ್ಕೆ ನಿಂತ ಶಹೀನ್ ಬಾಗ್ ಹೋರಾಟಗಾರ್ತಿ ಬಿಲ್ಕಿಸ್ ದಾದಿ ಪೊಲೀಸ್ ವಶಕ್ಕೆ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಸರಕಾರದ ನೂತನ ಕೃಷಿ ನೀತಿ ವಿರುದ್ಧ ಉತ್ತರ ಭಾರತದ ರೈತರು ಸಿಡಿದೆದ್ದು ನಡೆಸುತ್ತಿರುವ ತೀವ್ರ ಹೋರಾಟಕ್ಕೆ ಬೆಂಬಲ ನೀಡಲು ಮುಂದಾದ ಶಹೀನ್ ಬಾಗ್ ಹೋರಾಟಗಾರ್ತಿ ಬಿಲ್ಕಿಸ್ ದಾದಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ದೆಹಲಿ-ಹರ್ಯಾಣ ಗಡಿ ಸಿಂಘು ಪ್ರದೇಶದಲ್ಲಿ ಪ್ರತಿಭಟನೆ ನಿರತರಾಗಿರುವ ರೈತರನ್ನು ಬೆಂಬಲಿಸಲು ತೆರಳಿದ್ದ ಬಿಲ್ಕಿಸ್ ದಾದಿ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಗಳಾಗಿವೆ.

ಸರಕಾರ ರೈತರ ಬೇಡಿಕೆಗಳನ್ನು ಆಲಿಸಬೇಕು ಎಂದು ಬಿಲ್ಕಿಸ್ ದಾದಿ ಪೊಲೀಸ್ ವಶಕ್ಕೆ ತೆಗೆದುಕೊಳ್ಳುವುದಕ್ಕೂ ಮೊದಲು ತಿಳಿಸಿದ್ದಾರೆ.

ಶಹೀನ್ ಬಾಗ್ ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಬಿಲ್ಕೀಸ್ ದಾದಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿ, ಹಲವು ಅಂತಾರಾಷ್ಟ್ರೀಯ ಗೌರವಗಳಿಗೆ ಪಾತ್ರರಾಗಿದ್ದಾರೆ.

ಟಾಪ್ ಸುದ್ದಿಗಳು

ವಿಶೇಷ ವರದಿ