ಉಳ್ಳಾಲ | ಮುರಿದುಬಿದ್ದ ಹೋರ್ಡಿಂಗ್: ತಪ್ಪಿದ ಭಾರೀ ಅನಾಹುತ

Prasthutha|

- Advertisement -

ಉಳ್ಳಾಲ: ಕಟ್ಟಡ ಮೇಲಿದ್ದ ಜಾಹೀರಾತು ಹೋರ್ಡಿಂಗ್ ಭಾರೀ ಗಾಳಿಗೆ ತುಂಡಾಗಿದ್ದು, ಪಾದಾಚಾರಿ ವೃದ್ದರೊಬ್ಬರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ ಘಟನೆ ತೊಕ್ಕೊಟ್ಟು ಜಂಕ್ಷನ್ ನಲ್ಲಿ ನಡೆದಿದೆ.

ಸಂಜೆ ವೇಳೆಗೆ ಬೀಸಿದ ಗಾಳಿ ಮಳೆಗೆ ತೊಕ್ಕೊಟ್ಟು ಮುಖ್ಯ ರಸ್ತೆಗೆ ತಾಗಿಕೊಂಡಿರುವ ವಾಣಿಜ್ಯ ಕಟ್ಟಡದ ಮೇಲಿದ್ದ ಹೋರ್ಡಿಂಗ್ಸ್ ಮುರಿದು ಬಿದ್ದು ಹೋರ್ಡಿಂಗ್ಸ್ ನ ಕಬ್ಬಿಣದ ಸಲಾಕೆ ಬಿದ್ದು ವೃದ್ದರೊಬ್ಬರಿಗೆ ಸಣ್ಣಪುಟ್ಟ ಗಾಯವಾಗಿದೆ.

- Advertisement -

ಇನ್ನು ಮುರಿದುಬಿದ್ದ ಹೋರ್ಡಿಂಗ್ ತೆರವುಗೊಳಿಸಲಾಗಿದೆ.

Join Whatsapp