ಏಕೈಕ ಚಿನ್ನದ ಪದಕ ಗೆದ್ದವನಿಗೆ ಉಕ್ರೇನ್ ನಲ್ಲಿ ಜನಾಂಗೀಯ ನಿಂದನೆ

Prasthutha|

ಉಕ್ರೇನ್: ಉಕ್ರೇನಿ ತಾಯಿ ರುವಾಂಡಾದ ತಂದೆಗೆ ಹುಟ್ಟಿದ 30ರ ಝಾನ್ ಬೆಲೆನ್ಯುಕ್ ಈ ಬಾರಿಯ ಒಲಿಂಪಿಕ್ಸ್ನಲ್ಲಿ ಉಕ್ರೇನ್ ಪರ ಏಕೈಕ ಚಿನ್ನದ ಪದಕ ಗೆದ್ದವರು. ಆದರೆ ಜನಾಂಗೀಯ ನಿಂದನೆ ಮಾತ್ರ ಈ ಸಾಧಕನಿಗೂ ತಪ್ಪಿಲ್ಲ. ಈ ಬಗ್ಗೆ ಅವರು ಫೇಸ್ ಬುಕ್ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.

- Advertisement -

ಟೋಕಿಯೊ ಒಲಿಂಪಿಕ್ಸ್ನ 87 ಕಿಲೋ ವಿಭಾಗದ ಗ್ರೀಕೋ ರೋಮನ್ ಕುಸ್ತಿಯಲ್ಲಿ ಬೆಲೆನ್ಯುಕ್ ಚಿನ್ನ ಗೆದ್ದಿದ್ದರು. ಎರಡು ಬಾರಿ ವಿಶ್ವ ಕುಸ್ತಿ ಚಾಂಪಿಯನ್ ಸಹ ಆಗಿದ್ದಾರೆ.

ಅಧ್ಯಕ್ಷ ವ್ಲಾದಿಮಿರ್ ಜೆಲೆನ್ಸ್ಕೀಸ್ ರ ಸರ್ವೆಂಟ್ಸ್ ಆಫ್ ಪೀಪಲ್ಸ್ ಪಾರ್ಟಿಯ ಸಂಸದರಾಗಿಯೂ ಅವರು 2019ರಲ್ಲಿ ಆಯ್ಕೆಯಾದರು. ಅಲ್ಲಿನ ಮೊದಲ ಕಪ್ಪು ವರ್ಣೀಯ ಸಂಸದ ಅವರು. ಅದೇ ಅವರು ಜನಾಂಗೀಯ ನಿಂದನೆ ಅನುಭವಿಸುತ್ತಲೇ ಇರಲು ಕಾರಣ.

Join Whatsapp