ಉಕ್ರೇನ್ ನ ಖೆರ್ಸನ್ ನಗರ ರಷ್ಯಾ ಕೈವಶ !

Prasthutha|

ಕೀವ್‌: ಉಕ್ರೇನ್‌ ನ ಖೆರ್ಸನ್‌ ನಗರವನ್ನು ರಷ್ಯಾ ಪಡೆ ವಶಪಡಿಸಿಕೊಂಡಿದೆ. ರಷ್ಯಾ ಪಡೆ ಉಕ್ರೇನ್‌ ಮೇಲೆ ಆಕ್ರಮಣ ನಡೆಸಲು ಆರಂಭಿಸಿ ವಾರವಾಗಿದ್ದು, ವಶಕ್ಕೆ ಪಡೆದ ಮೊದಲ ನಗರ ಇದಾಗಿದೆ. ಖೆರ್ಸನ್‌ ನಗರವನ್ನು ರಷ್ಯಾ ವಶಕ್ಕೆ ಪಡೆದಿರುವ ಬಗ್ಗೆ ಸ್ಥಳೀಯ ಅಧಿಕಾರಿಗಳು ದೃಢಪಡಿಸಿದ್ದಾರೆ.

- Advertisement -

ನಗರದ ಎಲ್ಲ ಭಾಗಗಳ ಸುತ್ತಲೂ ರಷ್ಯಾ ಸುತ್ತುವರಿದಿದ್ದು, ಭಾರಿ ಅಪಾಯಕಾರಿ ಸ್ಥಿತಿ ಇದೆ ಎಂದು ಸ್ಥಳೀಯ ಆಡಳಿತದ ಮುಖ್ಯಸ್ಥ ಗೆನ್ನೆಡಿ ಲಖುತ ಬುಧವಾರ ರಾತ್ರಿ ಟೆಲಿಗ್ರಾಮ್‌ ನಲ್ಲಿ ಸಂದೇಶ ರವಾನಿಸಿದ್ದಾರೆ.

ಕಪ್ಪು ಸಮುದ್ರದ ಪ್ರಮುಖ ಬಂದರು ನಗರವಾಗಿರುವ ಖೆರ್ಸನ್‌ ನ ಮೇಯರ್‌ ಇಗೊರ್‌ ಕೊಲೈಖೈವ್‌ ಅವರು ರಷ್ಯಾ ಪಡೆಯ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ.

Join Whatsapp