ನ್ಯೂಜಿಲೆಂಡ್ ಸರಕಾರದ ಕಡ್ಡಾಯ ಕೊರೊನಾ ಲಸಿಕೆ ವಿರುದ್ಧ ಸಿಡಿದೆದ್ದ ಜನತೆ

Prasthutha|

ವೆಲ್ಲಿಂಗ್ಟನ್‌ : ಕಡ್ಡಾಯವಾಗಿ ಕೊರೊನಾ ವಿರುದ್ಧ ಲಸಿಕೆ ಹಾಕಿಸಿಕೊಳ್ಳಬೇಕು ಎಂಬ ನ್ಯೂಜಿಲೆಂಡ್‌ ಸರ್ಕಾರದ ನಿಯಮ ದೇಶದಲ್ಲಿ ಜನರನ್ನು ರೊಚ್ಚಿಗೇಳುವಂತೆ ಮಾಡಿದೆ. ಪೊಲೀಸರ ಜತೆಗೆ ಪ್ರತಿಭಟನಾಕಾರರು ಘರ್ಷಣೆಗೆ ಇಳಿದಿದ್ದಾರೆ ಮತ್ತು ಟೆಂಟ್‌ಗಳಿಗೆ ಬೆಂಕಿ ಹಚ್ಚಿದ್ದಾರೆ.

- Advertisement -

ಪೊಲೀಸರು ಪ್ರತಿಭಟನಾಕಾರರ ಟೆಂಟ್‌ಗಳನ್ನು ತೆರವುಗೊಳಿಸುವ ಪ್ರಯತ್ನದಿಂದ ಜನರು ರೊಚ್ಚಿಗೆದ್ದರು. ಅವರು ಟೆಂಟ್‌ಗಳಿಗೆ ಬೆಂಕಿ ಹಚ್ಚಿದ್ದಾರಲ್ಲದೆ, ಘರ್ಷಣೆಗೂ ಇಳಿದಿದ್ದಾರೆ. ಅವರನ್ನು ಚದುರಿಸುವ ನಿಟ್ಟಿನಲ್ಲಿ ಪೊಲೀಸರು ರಬ್ಬರ್‌ ಬುಲೆಟ್‌ಗಳನ್ನು ಪ್ರಯೋಗಿಸಿದ್ದಾರೆ.

ಇನ್ನು ಪ್ರತಿಭಟನಕಾರರ ಆಕ್ರೋಶಕ್ಕೆ ಸಂಸತ್‌ ಭವನದ ಒಂದು ಭಾಗ ಕೂಡ ಆಹುತಿಯಾಗಿದೆ. ಅದರ ಫೋಟೋ ಮತ್ತು ವಿಡಿಯೋ ಸಾಮಾಜಿಕ ಮಾದ್ಯಮಗಲಲ್ಲಿ ವೈರಲ್‌ ಆಗಿದೆ. ಅಲ್ಲಿ ಪ್ರತಿಭಟನಾಕಾರರು ದಾಂಧಲೆ ನಡೆಸಿ, ಬೆಂಕಿ ಹಚ್ಚಿದ್ದಾರೆ. ವೆಲ್ಲಿಂಗ್ಟನ್‌ನಿಂದ ದೇಶದಿಂದ ಇತರ ಭಾಗಗಳಿಗೆ ತೆರಳುವ ರೈಲುಗಳನ್ನು ರದ್ದುಗೊಳಿಸಲಾಗಿದೆ. ಕಾನೂನು ಮೀರಿ ವರ್ತಿಸಿದ ಆರೋಪಕ್ಕೆ ಸಂಬಂಧಿಸಿದಂತೆ 60ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

Join Whatsapp