ಕೀವ್: ಉಕ್ರೇನ್ ನ ಖೆರ್ಸನ್ ನಗರವನ್ನು ರಷ್ಯಾ ಪಡೆ ವಶಪಡಿಸಿಕೊಂಡಿದೆ. ರಷ್ಯಾ ಪಡೆ ಉಕ್ರೇನ್ ಮೇಲೆ ಆಕ್ರಮಣ ನಡೆಸಲು ಆರಂಭಿಸಿ ವಾರವಾಗಿದ್ದು, ವಶಕ್ಕೆ ಪಡೆದ ಮೊದಲ ನಗರ ಇದಾಗಿದೆ. ಖೆರ್ಸನ್ ನಗರವನ್ನು ರಷ್ಯಾ ವಶಕ್ಕೆ ಪಡೆದಿರುವ ಬಗ್ಗೆ ಸ್ಥಳೀಯ ಅಧಿಕಾರಿಗಳು ದೃಢಪಡಿಸಿದ್ದಾರೆ.
ನಗರದ ಎಲ್ಲ ಭಾಗಗಳ ಸುತ್ತಲೂ ರಷ್ಯಾ ಸುತ್ತುವರಿದಿದ್ದು, ಭಾರಿ ಅಪಾಯಕಾರಿ ಸ್ಥಿತಿ ಇದೆ ಎಂದು ಸ್ಥಳೀಯ ಆಡಳಿತದ ಮುಖ್ಯಸ್ಥ ಗೆನ್ನೆಡಿ ಲಖುತ ಬುಧವಾರ ರಾತ್ರಿ ಟೆಲಿಗ್ರಾಮ್ ನಲ್ಲಿ ಸಂದೇಶ ರವಾನಿಸಿದ್ದಾರೆ.
ಕಪ್ಪು ಸಮುದ್ರದ ಪ್ರಮುಖ ಬಂದರು ನಗರವಾಗಿರುವ ಖೆರ್ಸನ್ ನ ಮೇಯರ್ ಇಗೊರ್ ಕೊಲೈಖೈವ್ ಅವರು ರಷ್ಯಾ ಪಡೆಯ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ವರದಿಯಾಗಿದೆ.