ಉಕ್ರೇನ್ ನ ಅತ್ಯಂತ ಪ್ರಬಲ ವಸಾಹತು ನಗರಗಳಲ್ಲಿ ಒಂದಾದ ಅವ್ದಿಕ್ವಾ ನಗರದ ಮೇಲೆ ರಷ್ಯಾ ಸೈನಿಕರು ಸಂಪೂರ್ಣ ನಿಯಂತ್ರಣ ಸಾಧಿಸಿದ್ದಾರೆ. ಕೀವ್ ನಗರದಲ್ಲಿನ ಸೈನಿಕರ ಸಾವಿಗೆ ಕಡಿವಾಣ ಹಾಕುವ ಉದ್ದೇಶದಿಂದ ಸೇನೆಯನ್ನು ಹಿಂಪಡೆಯುವುದಾಗಿ ಉಕ್ರೇನ್ ಘೋಷಿಸಿದ ಬೆನ್ನಲ್ಲೇ ರಷ್ಯಾ ಅವ್ದಿಕ್ವಾ ನಗರದ ಮೇಲೆ ನಿಯಂತ್ರಣ ಸಾಧಿಸಿರುವುದಾಗಿ ಹೇಳಿಕೊಂಡಿದೆ.
ಕಳೆದ ಮೇ ತಿಂಗಳಲ್ಲಿ ಭಕ್ ಮುಟ್ ನಗರ ವಶಪಡಿಸಿಕೊಂಡ ನಂತರ ರಷ್ಯಾಗೆ ಇದು ಅತೀ ದೊಡ್ಡ ಗೆಲುವಾಗಿದೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಇದೊಂದು ಮಹತ್ವದ ಜಯ ಎಂದು ಘೋಷಿಸಿದ್ದಾರೆ.
ಅಮೆರಿಕದ ಚುನಾವಣೆಯ ಹಿನ್ನೆಲೆಯಲ್ಲಿ ಉಕ್ರೇನ್ ಗೆ ತಲುಪುತ್ತಿದ್ದ ಶಸ್ತ್ರಾಸ್ತ್ರಗಳು ಕಡಿಮೆ ಆಗಿ ಕೊರತೆ ಅನುಭವಿಸುತ್ತಿದೆ. ಇದರ ಸಂಪೂರ್ಣ ಲಾಭ ಪಡೆದ ರಷ್ಯಾ ಪ್ರಮುಖ ನಗರವನ್ನು ವಶಕ್ಕೆ ಪಡೆದಿದೆ.