ಬೆಂಗಳೂರು : ಇಂದು ಬೆಂಗಳೂರಿನ ಆರ್ ಆರ್ ನಗರ ಕ್ಷೇತ್ರದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ಜನಸ್ಪಂದನಾ ಕಾರ್ಯಕ್ರಮ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ಬಿಜೆಪಿಯ ಶಾಸಕ ಮುನಿರತ್ನ ಕೂಡ ಭಾಗಿಯಾಗಿದ್ದಾರೆ. ಮುನಿರತ್ನ ವೇದಿಕೆ ಆಗಮಿಸುತ್ತಿದ್ದಂತೆ ಕೈ ಕಾರ್ಯಕರ್ತರು ಡಿಕೆ ಶಿವಕುಮಾರ್ ಗೆ ಜೈ ಎಂದು ಘೋಷಣೆ ಕೂಗಿದ್ದು, ಮುನಿರತ್ನ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜನಸ್ಪಂದನ ಕಾರ್ಯಕ್ರಮದಲ್ಲಿ ವೇದಿಕೆಗೆ ಬರುತ್ತಿದಂತೆ ಡಿಕೆಶಿಗೆ ಕಾರ್ಯಕರ್ತರು ಜೈಕಾರ ಹಾಕಿದರು. ಇದರಿಂದ ಆಕ್ರೋಶಗೊಂಡ ಮುನಿರತ್ನ, ಇದು ಜಿಂದಾಬಾದ್ ಕೂಗುವಂತ ಕಾರ್ಯಕ್ರಮ ಅಲ್ಲ. ಸಾರ್ವಜನಿಕರ ಸಮಸ್ಯೆಗಳಿಗೆ ಏರ್ಪಡಿಸಿರುವಂತಹ ಸರ್ಕಾರದ ಕಾರ್ಯಕ್ರಮ. ಘೋಷಣೆ ಕೂಗಬೇಡಿ ಎಂದಿದ್ದಾರೆ.
ಇದು ಸರ್ಕಾರದ ಕಾರ್ಯಕ್ರಮ ಘೋಷಣೆ ಹಾಕಬೇಡಿ ಎಂದ ಮುನಿರತ್ನ , ನಾವು ಶಾಶ್ವತವಲ್ಲ ಗೊತ್ತಿರಲಿ ಎಂದಿದ್ಜಾರೆ. ಕಾರ್ಯಕ್ರಮದಲ್ಲಿ ಡಿಕೆ ಶಿವಕುಮಾರ್, ಸಂಸದ ಡಿಕೆ ಸುರೇಶ್, ಶಾಸಕ ಮುನಿರತ್ನ, ಎಸ್ ಟಿ ಸೋಮಶೇಖರ್ ಸೇರಿ ಹಲವು ನಾಯಕರು ಭಾಗಿಯಾಗಿದ್ದಾರೆ.