ಬ್ರಿಟನ್ ಪ್ರಧಾನಿ ಚುನಾವಣೆ: ಎರಡನೇ ಸುತ್ತಿನಲ್ಲೂ ರಿಷಿ ಸುನಕ್ ಅಗ್ರಸ್ಥಾನ

Prasthutha|

- Advertisement -

ಲಂಡನ್: ಬ್ರಿಟನ್ ನೂತನ ಪ್ರಧಾನಿ ಆಯ್ಕೆಗಾಗಿ ನಡೆದ ಮತದಾನದಲ್ಲಿ ಎರಡನೇ ಸುತ್ತಿನಲ್ಲಿಯೂ ರಿಷಿ ಸುನಕ್ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಇನ್ಫೋಸಿಸ್ ನಾರಾಯಣ ಮೂರ್ತಿ ಅವರ ಅಳಿಯರಾಗಿರುವ ರಿಷಿ ಸುನಕ್ ಪ್ರಧಾನಿ ಹುದ್ದೆಗೆ ಮತ್ತಷ್ಟು ಹತ್ತಿರವಾಗಿದ್ದಾರೆ. ಬೋರಿಸ್ ಜಾನ್ಸನ್ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಮಹತ್ವದ ಹಣಕಾಸು ಖಾತೆ ನಿರ್ವಹಿಸಿದ್ದರು. ಆಡಳಿತ ವೈಫಲ್ಯ ವಿರೋಧಿಸಿ ರಾಜೀನಾಮೆ ನೀಡಿದ್ದರು. ಪ್ರಧಾನಿ ಹುದ್ದೆಗೆ ನಡೆಯುತ್ತಿರುವ ಪೈಪೋಟಿಯಲ್ಲಿ ರಿಷಿ ಸುನಕ್ ಹತ್ತಿರವಾಗಿದ್ದು, ಗೆಲುವಿನ ವಿಶ್ವಾಸದಲ್ಲಿದ್ದಾರೆ. ಯುಕೆ ನಾಯಕತ್ವ ಸ್ಪರ್ಧೆಯಲ್ಲಿ ರಿಷಿ ಸುನಕ್ ಎರಡನೇ ಸುತ್ತಿನ ಮತದಾನದಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

- Advertisement -

ರಿಷಿ ಸುನಕ್ 101 ಮತಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಮೊರ್ಡಾಂಟ್ 83 ಮತ, ವಿದೇಶಾಂಗ ಕಾರ್ಯದರ್ಶಿ ಲಿಜ್ ಟ್ರಸ್ 64 ಮತಗಳನ್ನು ಪಡೆದರು. ಅಟಾರ್ನಿ ಜನರಲ್ ಸುಯೆಲ್ಲಾ ಬ್ರಾವರ್‌ ಮನ್ 27 ಮತಗಳೊಂದಿಗೆ ಹೊರಹಾಕಲ್ಪಟ್ಟರು. ಶಾಸಕ ಟಾಮ್ ತುಗೆಂಧತ್ 32 ಮತಗಳನ್ನು ಪಡೆದರೆ, ಕೆಮಿ ಬಡೆನೋಚ್ 49 ಮತಗಳನ್ನು ಪಡೆದಿದ್ದಾರೆ.

Join Whatsapp