ಕೋವಿಡ್ ಚಿಕಿತ್ಸೆಗಾಗಿ ಮಾತ್ರೆ| ಬ್ರಿಟನ್ ನಲ್ಲಿ ಅನುಮೋದನೆ

Prasthutha|

ಲಂಡನ್: ಕೋವಿಡ್‌ ಸೋಂಕಿತರಿಗೆ ನೀಡಲಾಗುವ ವಿಶ್ವದ ಮೊದಲ ಮಾತ್ರೆಗೆ ಬ್ರಿಟನ್ ಅನುಮೋದನೆ ನೀಡಿದೆ.

- Advertisement -

ಅಮೇರಿಕನ್ ಫಾರ್ಮಾ ಕಂಪನಿಯು ತಯಾರಿಸಿದ ಆಂಟಿವೈರಲ್ ಮಾತ್ರೆಗಳನ್ನು ಬ್ರಿಟಿಷ್ ಮೆಡಿಸಿನ್ಸ್ ರೆಗ್ಯುಲೇಟರ್ ಅನುಮೋದಿಸಿದೆ.

“ಕೋವಿಡ್ ರೋಗಲಕ್ಷಣಗಳಿರುವ ಜನರಿಗೆ ದಿನಕ್ಕೆ ಎರಡು ಬಾರಿ ಮಾತ್ರೆ ನೀಡಬಹುದು. ಈ ಮಾತ್ರೆಗಳು ಕೋವಿಡ್ ಚಿಕಿತ್ಸಾ ಕ್ಷೇತ್ರದಲ್ಲಿ ಕ್ರಾಂತಿ ಮಾಡಬಲ್ಲವು” ಎಂದು ಬ್ರಿಟಿಷ್ ಹೆಲ್ತ್ ಸೆಕ್ರೆಟರಿ ಸಾಜಿದ್ ಜಾವೇದ್ ಹೇಳಿದ್ದಾರೆ.

- Advertisement -

ಈ ಮಾತ್ರೆಯನ್ನು ಅಮೆರಿಕದ ಫಾರ್ಮಾ ಕಂಪನಿಯಾದ MSD ತಯಾರಿಸಿದೆ. ಅನುಮೋದನೆ ಲಭಿಸುವುದರೊಂದಿಗೆ ಈ ಮಾತ್ರೆಗೆ ಬ್ರಿಟನ್ ನಿಂದ ಭಾರೀ ಬೇಡಿಕೆ ಬಂದಿದೆ. ಜತೆಗೆ ಹಲವು ದೇಶಗಳು ಔಷಧ ಖರೀದಿಸಲು ಸಿದ್ಧತೆ ನಡೆಸಿವೆ.

ಆದರೆ, ಮಾತ್ರೆ ಸೇವನೆಯಿಂದ ಬೊಜ್ಜು, ಮಧುಮೇಹ ಮತ್ತು ಹೃದ್ರೋಗದಂತಹ ಅಡ್ಡ ಪರಿಣಾಮಗಳಿಗೆ ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ.

Join Whatsapp