ಹಣಕ್ಕಾಗಿ ಬಾಲಕನನ್ನು ಅಪಹರಿಸಿ ಕೊಲೆ: ಆರೋಪಿಯ ಬಂಧನ

Prasthutha|

4 ಲಕ್ಷ ರೂ. ಬೇಡಿಕೆ ಇಟ್ಟಿದ್ದ ದುಷ್ಕರ್ಮಿಗಳು

- Advertisement -

ಮೈಸೂರು: ಬಾಲಕನನ್ನು ಅಪಹರಿಸಿದ ದುಷ್ಕರ್ಮಿಗಳು 4 ಲಕ್ಷ ರೂ. ಗೆ ಬೇಡಿಕೆ ಇಟ್ಟು, ಹಣ ದೊರಕುವುದಿಲ್ಲ ಎಂದು ಖಚಿತವಾದ ನಂತರ ಗುರುತು ಪತ್ತೆಯಾಗುವ ಭೀತಿಯಿಂದ ಬಾಲಕನನ್ನು ಹತ್ಯೆ ಮಾಡಿ ಕೆರೆಯೊಂದರ ಬಳಿ ಶವವನ್ನು ಬಿಸಾಡಿರುವ ಘಟನೆ ಹುಣಸೂರ ತಾಲೂಕಿನ ಹನಗೋಡಿನಲ್ಲಿ ನಡೆದಿದೆ.


ಹನಗೋಡು ಗ್ರಾಮದ ತರಕಾರಿ ವ್ಯಾಪಾರಿ ನಾಗರಾಜ್ ಎಂಬವರ ಪುತ್ರ ಕಾರ್ತಿಕ್ (9) ಕೊಲೆಯಾದ ಬಾಲಕ.
ಬಾಲಕ ಕಾರ್ತಿಕ್ ಬುಧವಾರ ರಾತ್ರಿ 7.30ರ ವೇಳೆಯಲ್ಲಿ ಮನೆಯಿಂದ ಪಟಾಕಿ ತರಲು ತೆರಳಿದ್ದ ವೇಳೆ ಅಪರಿಚಿತರು ಅಪಹರಿಸಿದ್ದರು. ಅಪಹರಣಗಾರ ಮೊಬೈಲ್ ನಲ್ಲಿ ನಾಗರಾಜ್ ರನ್ನು ಸಂಪರ್ಕಿಸಿದ್ದಾನೆ. 4 ಲಕ್ಷ ರೂ. ಹಣ ನೀಡಿದಲ್ಲಿ ಮಗನನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾನೆ.

- Advertisement -

ಪೊಲೀಸರಿಗೆ ದೂರು ನೀಡಿದಲ್ಲಿ ಮಗುವನ್ನು ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ಆತಂಕಗೊಂಡ ಪೋಷಕರು ಕೂಡಲೆ ಹುಣಸೂರು ಗ್ರಾಮಾಂತರ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಕೂಡಲೆ ಎಚ್ಚೆತ್ತ ಪೊಲೀಸರು ಮೇಲಾಧಿಕಾರಿಗಳಿಗೆ ವಿಚಾರ ಮುಟ್ಟಿಸಿದ್ದಾರೆ.


ಪೊಲೀಸರು ಮೊಬೈಲ್ ಕರೆ ಆಧರಿಸಿ ಆರೋಪಿ ಜವರಯ್ಯನನ್ನು ಹೆಡೆಮುರಿ ಕಟ್ಟಿದ್ದಾರೆ. ವಿಚಾರಣೆಯ ವೇಳೆ ಆತ ಬಾಲಕನನ್ನು ಕೊಂದಿರುವುದನ್ನು ಬಾಯ್ಬಿಟ್ಟಿದ್ದಾನೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಇನ್ನುಳಿದ ಆರೋಪಿಗಳಿಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.

Join Whatsapp