ಉಡುಪಿ: ಜಾತಿಗಣತಿ ವರದಿ ಅಂಗೀಕರಿಸಲು ಮತ್ತು 2ಬಿ ಮೀಸಲಾತಿ ಶೇ.8ಕ್ಕೆ ಏರಿಸುವಂತೆ SDPI ಜಿಲ್ಲಾ ಸಮಿತಿ ಧರಣಿ

Prasthutha|

ಉಡುಪಿ: ಕರ್ನಾಟಕ ಸರ್ಕಾರ ಕಾಂತರಾಜ್ ಆಯೋಗದ ಜಾತಿಗಣತಿ ವರದಿಯನ್ನು ಅಂಗೀಕರಿಸಿ ಜಾರಿಗೆ ತರಬೇಕು ಮತ್ತು ಮುಸ್ಲಿಮರ ಮೀಸಲಾತಿ 2ಬಿ ಪ್ರಮಾಣವನ್ನು ಶೇ. 8ಕ್ಕೆ ಏರಿಸಬೇಕು ಎಂದು ಒತ್ತಾಯಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ವತಿಯಿಂದ ಅಕ್ಟೋಬರ್ 09, 2023 ರಿಂದ ಅಕ್ಟೋಬರ್ 19 ರವರೆಗೆ ಅಭಿಯಾನವನ್ನು ಹಮ್ಮಿಕೊಂಡಿದ್ದು, ಇದರ ಅಂಗವಾಗಿ SDPI ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಇಂದು ಉಡುಪಿಯ ಬನ್ನಂಜೆಯಲ್ಲಿರುವ ತಾಲೂಕ್ ಕಛೇರಿ ಬಳಿ ಜಿಲ್ಲಾಧ್ಯಕ್ಷರಾದ ಶಾಹಿದ್ ಆಲಿ ನೇತೃತ್ವದಲ್ಲಿ ಧರಣಿಯನ್ನು ನಡೆಸಲಾಯಿತು.

- Advertisement -

ಧರಣಿಯನ್ನು ಉದ್ದೇಶಿಸಿ ಮಾತನಾಡಿದ ಶಾಹಿದ್ ಆಲಿ, ಕಾಂತರಾಜ್ ವರದಿಯನ್ನು ಸರ್ಕಾರ ಕೂಡಲೇ ಅಂಗೀಕರಿಸಿ ಸಾರ್ವಜನಿಕಗೊಳಿಸಬೇಕು ಮತ್ತು 2ಬಿ ಮೀಸಲಾತಿಯನ್ನು ಶೇ 8ಕ್ಕೆ ಏರಿಸಬೇಕು ಎಂದು ಒತ್ತಾಯಿಸಿದರು.

ಕ್ರೈಸ್ತ ಧರ್ಮ ಗುರುಗಳಾದ ಫಾದರ್ ವಿಲಿಯಂ ಮಾರ್ಟಿಸ್ ಧರಣಿಯಲ್ಲಿ ಭಾಗವಹಿಸಿ ಮಾತನಾಡಿದರು. ಎಸ್ ಡಿ ಪಿ ಐ. ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶ್ರಪ್ ಬಾವ, ಕಾಪು ಕ್ಷೇತ್ರ ಸಮಿತಿ ಅಧ್ಯಕ್ಷ ಹನೀಫ್ ಮೂಳೂರು, ಕಾವ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ನೌಶಿನ್ ಹಸ್ರತ್, ಕಾಪು ಪುರಸಭೆ ಸದಸ್ಯರಾದ ನೂರುದ್ದೀನ್ ಮತ್ತು ವಿಮೆನ್ ಇಂಡಿಯಾ ಮೂಮೆಂಟ್ ಜಿಲ್ಲಾಧ್ಯಕ್ಷ ನಾಝಿಯ ನಸ್ರುಲ್ಲಾ ಭಾಗವಹಿಸಿದರು.

- Advertisement -

ಧರಣಿಯ ಭಾಗವಾಗಿ ಜಿಲ್ಲಾಧಿಕಾರಿಯ ಮುಖೇನ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಲಾಯಿತು.



Join Whatsapp