ಯು.ಪಿ. ಮಾಡೆಲ್: ಆಸ್ಪತ್ರೆ ಒಳಗೆ ನುಗ್ಗಿ ರೋಗಿಗಿಟ್ಟ ಆಹಾರ ತಿನ್ನುತ್ತಿರುವ ಬೀದಿ ನಾಯಿ

Prasthutha|

ಮೊರಾದಾಬಾದ್: ರೋಗಿಯ ಪಕ್ಕದಲ್ಲಿದ್ದ ಆಹಾರವನ್ನು ಆಸ್ಪತ್ರೆಯ ಒಳಗೆ ನುಗ್ಗಿ ಬೀದಿ ನಾಯಿಯೊಂದು ತಿನ್ನುತ್ತಿರುವ ಆಘಾತಕಾರಿ ಘಟನೆ ಉತ್ತರಪ್ರದೇಶದ ಮೊರಾದಾಬಾದ್ ಜಿಲ್ಲೆಯಲ್ಲಿ ನಡೆದಿದೆ.

- Advertisement -


ಇದನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಇದು ಯು.ಪಿ. ಮಾಡಲ್ ಎಂದು ಟ್ರೋಲ್ ಮಾಡುತ್ತಿದ್ದಾರೆ.


ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ವೀಡಿಯೊದಲ್ಲಿ ರೋಗಿಯು ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದಾರೆ. ನಾಯಿ ಬಂದು ರೋಗಿಯ ಬೆಡ್ ಪಕ್ಕದಲ್ಲಿ ಇಟ್ಟಿದ್ದ ನೀರನ್ನು ಕುಡಿಯುವುದು, ರೋಗಿಗೆ ತಂದಿಟ್ಟಿದ್ದ ಆಹಾರ ತಿನ್ನುವುದು ಕಂಡು ಬಂದಿದೆ. ಮೊರಾದಾಬಾದ್ನ ಜಿಲ್ಲಾ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಕುಲದೀಪ್ ಸಿಂಗ್ ಅವರು ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.

- Advertisement -