ಉಡುಪಿ: ಜಿಲ್ಲೆಯಲ್ಲಿ ತಂಗುವ ವಿದೇಶೀಯರ ಮಾಹಿತಿ ನೀಡುವುದು ಕಡ್ಡಾಯ

Prasthutha|

1946ರ ವಿದೇಶೀಯರ ಕಾಯ್ದೆ ಕಲಂ 7ರಂತೆ ಉಡುಪಿ ಜಿಲ್ಲೆಯ ಯಾವುದೇ ಸ್ಥಳದಲ್ಲಿ ವಿದೇಶೀಯರು ತಂಗಿದರೆ 24 ಗಂಟೆಗಳ ಒಳಗೆ ಅವರ ಮಾಹಿತಿಯನ್ನು ಜಿಲ್ಲಾ ಪೋಲೀಸು ವರಿಷ್ಠಾಧಿಕಾರಿಗೆ ನೀಡುವುದು ಕಡ್ಡಾಯ ಎಂದು ಸುತ್ತೋಲೆ ಹೊರಡಿಸಲಾಗಿದೆ.

- Advertisement -

ವಿದ್ಯಾ ಸಂಸ್ಥೆ, ಹೋಟೆಲ್, ಮನೆ, ಛತ್ರ ಎಲ್ಲೇ ವಿದೇಶೀಯರು ಬಂದು ತಂಗಿದರೆ ಸಂಬಂಧಿಸಿದ ಸ್ಥಳ ಒದಗಿಸಿದವರು ಫಾರ್ಮ್ ಸಿ ಭರ್ತಿ ಮಾಡಿ ಪೊಲೀಸ್ ವರಿಷ್ಠಾಧಿಕಾರಿಗೆ ಸಲ್ಲಿಸತಕ್ಕದ್ದು.

ತಪ್ಪಿದರೆ 1946ರ ವಿದೇಶೀಯರ ಕಾಯ್ದೆಯ ಕಲಂ 14ರಂತೆ ಸಂಬಂಧಿಸಿದವರ ವಿರುದ್ಧ ಕ್ರಮ ಇರುತ್ತದೆ. 5 ವರುಷ ಜೈಲು ಶಿಕ್ಷೆ ಮತ್ತು ದಂಡ ಹಾಕಲು ಅವಕಾಶ ಇದೆ ಎಂದು ತಿಳಿಸಲಾಗಿದೆ.

Join Whatsapp