ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ SDPI ಪಕ್ಷವನ್ನು ಬಲಪಡಿಸೋಣ: ಅಬ್ದುಲ್ ಮಜೀದ್ ಮೈಸೂರು

Prasthutha|

ಬಂಟ್ವಾಳ: ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ SDPI ಪಕ್ಷವನ್ನು ಬಲಪಡಿಸಲು ಪ್ರತಿಯೊಂದು ಕಾರ್ಯಕರ್ತರು ಶಕ್ತಿಮೀರಿ ಪ್ರಯತ್ನಿಸಬೇಕು ಎಂದು SDPI ಕರ್ನಾಟಕ ರಾಜ್ಯಾಧ್ಯಕ್ಷರಾದ ಅಬ್ದುಲ್ ಮಜೀದ್ ಮೈಸೂರು ಕರೆ ನೀಡಿದರು.

- Advertisement -

ಬಂಟ್ವಾಳದ ಪಕ್ಷದ ಕಛೇರಿಯಲ್ಲಿ ನಡೆದ SDPI ದಕ್ಷಿಣ ಕನ್ನಡ ಜಿಲ್ಲಾ ಕಾರ್ಯಕಾರಿಣಿ ಸಭೆಯಲ್ಲಿ ಜಿಲ್ಲಾ ನಾಯಕರನ್ನು ಉದ್ದೇಶಿಸಿ ಮಾತನಾಡಿದ ಅವರು, ಕಲುಷಿತಗೊಡ ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಆಳುವ ಸರಕಾರದ ನಿರಂತರ ಜನವಿರೋಧಿ ಮತ್ತು ಸಂವಿಧಾನ ವಿರೋಧಿ ನಿಲುವುಗಳು ಹಾಗೂ ವಿರೋಧ ಪಕ್ಷದ ನಿರ್ಲಕ್ಷ್ಯ ದೋರಣೆಯಿಂದ ಜನಸಾಮಾನ್ಯರು ಭ್ರಮನಿರಸನ ಗೊಂಡಿದ್ದಾರೆ , ಚುನಾವಣೆ ಹತ್ತಿರ ಬರುವಾಗ ಧರ್ಮಾದಾರಿತವಾದ ಅನಗತ್ಯ ವಿಚಾರಗಳನ್ನು ಮುನ್ನಲೆಗೆ ತಂದು ತಮ್ಮ ಪಕ್ಷದ ಮತ ಬ್ಯಾಂಕನ್ನು ಭದ್ರಪಡಿಸಿ ಚುನಾವಣೆಯನ್ನು ಎದುರಿಸುವ ಮೂಲಕ ದೇಶದ ಪ್ರಧಾನ ಪಕ್ಷಗಳು ರಾಜಕೀಯ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಈಗಾಗಲೇ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕೊಡಲಿಯೇಟು ನೀಡಿ ಸಂವಿದಾನವನ್ನೇ ದುರ್ಬಲ ಗೊಳಿಸಲಾಗಿದೆ. ಇದು ದೇಶದ ಅಸ್ಮಿತೆ ಮತ್ತು ಬಹುತ್ವಕ್ಕೆ ಅಪಾಯಕಾರಿ ಬೆಳವಣಿಗೆ ಆಗಿದೆ . ಇಂತಹ ಘಟನೆಗಳಿಂದ ಜನಸಾಮಾನ್ಯರು ಆತಂಕದ ದಿನಗಳಲ್ಲಿ ಬದುಕು ಸಾಗಿಸುತ್ತಿದ್ದಾರೆ. ಸರಕಾರದ ಅವೈಜ್ಞಾನಿಕ ನಿಲುವುಗಳನ್ನು ಪ್ರಶ್ನಿಸುವವರಿಗೆ ಕೈಕೋಳ ತೊಡಿಸುವ ಪ್ರಕ್ರಿಯೆಯಲ್ಲಿ ಸರಕಾರವು ಪೊಲೀಸ್ ಇಲಾಖೆ ಮತ್ತು ತನಿಖಾ ಸಂಸ್ಥೆಗಳನ್ನು ತಮಗೆ ಬೇಕಾದಂತೆ ಬಳಸುತ್ತಿರುವುದು ಸರ್ವಾಧಿಕಾರಿ ಆಡಳಿತದ ಮುನ್ಸೂಚನೆಯನ್ನು ತೋರಿಸುತ್ತದೆ‌ ಇದರ ವಿರುದ್ಧ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ನಿರಂತರವಾಗಿ ಹೋರಾಟ ಕೈಗೊಳ್ಳಬೇಕು. ದಕ್ಷಿಣ ಕನ್ನಡ ಜಿಲ್ಲೆಯು ವಿಧ್ಯಾವಂತರ ಹಾಗೂ ಪ್ರಜ್ಞಾವಂತಿಗೆ ಹೊಂದಿದ ಜಿಲ್ಲೆಯಾಗಿದೆ , ಆದರೆ ಇಲ್ಲಿ ಇಂದು ಅಭಿವೃದ್ಧಿ ನೆನೆಗುದಿಗೆ ಬಿದ್ದು ಕೋಮುವಾದಿ ಅಜೆಂಡಾಗಳು ಚರ್ಚೆಯಲ್ಲಿರುವುದು ವಿಪರ್ಯಾಸ ಆಗಿದೆ. ಜಿಲ್ಲೆಯ ಜನತೆ ನಿರುದ್ಯೋಗ, ಮೂಲಭೂತ ಸಮಸ್ಯೆ, ಮಾಲಿನ್ಯ ಸಮಸ್ಯೆ ಸೇರಿದಂತೆ ಹಲವಾರು ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ . ಇಂತಹ ಸಂದರ್ಭದಲ್ಲಿ SDPI ಜನರ ಸಮಸ್ಯೆಗಳಿಗೆ ಹೋರಾಟದ ಮೂಲಕ ಪರಿಹಾರ ದೊರೆಕಿಸಿ ಕೊಡುವುದರೊಂದಿಗೆ ಪಕ್ಷವನ್ನು ಜನಸಾಮಾನ್ಯರ ಬಳಿಗೆ ತಲುಪಿಸಬೇಕು ಇದಕ್ಕಾಗಿ ಪ್ರತಿಯೊಂದು ಕಾರ್ಯಕರ್ತರು ಶಕ್ತಿಮೀರಿ ಪ್ರಯತ್ನಿಸಬೇಕು” ಎಂದು ಅವರು ಕರೆ ನಿಡಿದರು.

- Advertisement -

 ಇಂದು ನಡೆಯುತ್ತಿರುವುದು ಸತ್ಯ ಮತ್ತು ಮಿಥ್ಯದ ನಡುವಿನ ಹೋರಾಟವಾಗಿದೆ ಇಂದು ನಮ್ಮನ್ನಾಳುವ ವ್ಯವಸ್ಥೆ ಮಿಥ್ಯದ ಪರವಾಗಿದ್ದರೆ ನಾವು ಸತ್ಯದ ಪರವಾಗಿದ್ದೇವೆ ಎಂಬ ಕಾರಣದಿಂದ ನಮ್ಮ ಶಬ್ದವನ್ನು ದಮನಿಸಲು ಆಡಳಿತ ಪಕ್ಷದೊಂದಿಗೆ ಸೋಕಾಲ್ಡ್ ಜಾತ್ಯತೀತ ಪಕ್ಷಗಳು ನಿರಂತರ ಪ್ರಯತ್ನ ಪಡುತ್ತಿದೆ. ಇಂತಹ  ಶಕ್ತಿಗಳ ಮುಂದೆ ಒಂದು ದಿನ ನಾವು ವಿಜಯ ಸಾದಿಸಿಯೇ ತೀರುತ್ತೇವೆ ಇದಕ್ಕೆ ಇತಿಹಾಸದ ಘಟನೆಗಳೇ ನಮಗೆ ಪ್ರೇರಣೆ ಎಂದು ಅಬ್ದುಲ್ ಮಜೀದ್ ಹೇಳಿದರು

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮುಂಬರುವ ಚುನಾವಣೆಯಲ್ಲಿ ಕೈಗೊಳ್ಳಬೇಕಾದ ಕೆಲಸ ಕಾರ್ಯಗಳು ಮತ್ತು ಹೋರಾಟಗಳ ಬಗ್ಗೆ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ರಾಷ್ಟ್ರೀಯ ಕಾರ್ಯದರ್ಶಿಯಾದ ಅಲ್ಫೋನ್ಸೋ ಫ್ರಾಂಕೋ, ರಾಜ್ಯ ಸಮಿತಿ ಸದಸ್ಯರಾದ ಅಥಾವುಲ್ಲಾ ಜೋಕಟ್ಟೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಮಾಲ್ ಜೋಕಟ್ಟೆ, ಜಿಲ್ಲಾ ಕಾರ್ಯದರ್ಶಿಗಳಾದ ಅಕ್ಬರ್ ಬೆಳ್ತಂಗಡಿ, ಶಾಕಿರ್ ಅಳಕೆಮಜಲು ಹಾಗೂ ಜಿಲ್ಲಾ ಸಮಿತಿಯ ಸದಸ್ಯರು ಕ್ಷೇತ್ರ ಸಮಿತಿಯ ನಾಯಕರು ಉಪಸ್ಥಿತರಿದ್ದರು

Join Whatsapp