ಮೈಸೂರು ವಿವಿ ಹಂಗಾಮಿ ಕುಲಪತಿಯಾಗಿ ಉಡುಪಿ ಮೂಲದ ಪ್ರೊ.ಮುಜಾಫರ್ ಅಸ್ಸಾದಿ ನೇಮಕ

Prasthutha|

- Advertisement -

► ಈ ಹುದ್ದೆ ಅಲಂಕರಿಸಿದ ಮೊದಲ ಮುಸ್ಲಿಮ್ ಪ್ರೊಫೆಸರ್ ಅಸಾದಿ

ಮೈಸೂರು ವಿಶ್ವವಿದ್ಯಾನಿಲಯದ ಹಂಗಾಮಿ ಕುಲಪತಿಯಾಗಿ ಉಡುಪಿ ಮೂಲದ ಪ್ರೊ.ಮುಜಾಫರ್ ಹುಸೇನ್ ಅಸ್ಸಾದಿ ನೇಮಕಗೊಂಡಿದ್ದಾರೆ.

- Advertisement -

ಮುಜಾಫರ್ ಅಸಾದಿ ಈ ಹುದ್ದೆ ಅಲಂಕರಿಸಿರುವ ಮೊದಲ ಮುಸ್ಲಿಮ್ ಪ್ರೊಫೆಸರ್ ಆಗಿದ್ದಾರೆ.

ಮೈಸೂರು ವಿಶ್ವವಿದ್ಯಾನಿಲಯದ ಹಂಗಾಮಿ ಕುಲಪತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಪ್ರೊ.ಎಚ್.ರಾಜಶೇಖರ್ ಅವರ
ಅವಧಿಯು ಫೆ.19ಕ್ಕೆ ಅಂತ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ನೂತನ ಹಂಗಾಮಿ ಕುಲಪತಿಯಾಗಿ ರಾಜ್ಯಶಾಸ್ತ್ರ ವಿಭಾಗದ ಡೀನ್ ಪ್ರೊ.ಮುಜಾಫರ್ ಹುಸೇನ್ ಅಸ್ಸಾದಿ ಅವರನ್ನು ನೇಮಕ ಮಾಡಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.

Join Whatsapp