ಉದಯನಿಧಿ ಸ್ಟಾಲಿನ್ ಸಚಿವರಾಗಿ ಪ್ರಮಾಣವಚನ  ಸ್ವೀಕಾರ

Prasthutha|

ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಮಗ ಉದಯನಿಧಿ ಸ್ಟಾಲಿನ್ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.

- Advertisement -

ಬುಧವಾರ  ಬೆಳಿಗ್ಗೆ 9.15ರ ಸುಮಾರಿಗೆ ರಾಜ್ಯಪಾಲ ಆರ್.ಎನ್. ರವಿ ಅವರು ರಾಜಭವನದಲ್ಲಿ ಉದಯನಿಧಿ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.

ಚೆನ್ನೈನ ಚೆಪಾಕ್–ತಿರುವಲ್ಲಿಕೇನಿ ಕ್ಷೇತ್ರದಿಂದ ಮೊದಲ ಬಾರಿಗೆ ಉದಯ್ ಶಾಸಕರಾಗಿ ಆಯ್ಕೆಯಾಗಿದ್ದಾರೆ.

- Advertisement -

ಪ್ರಮಾಣವಚನ ಸ್ವೀಕಾರದ ಬಳಿಕ ಹತ್ತು ಮಂದಿ ಮಂತ್ರಿಗಳ ಖಾತೆಗಳನ್ನು ಮರು ಹಂಚಿಕೆ ಮಾಡಲಾಯಿತು. ಹೊಸ ಮಂತ್ರಿ ಉದಯನಿಧಿ ಸ್ಟಾಲಿನ್ ಅವರಿಗೆ ಯುವಜನ ಮತ್ತು ಕ್ರೀಡಾಭಿವೃದ್ಧಿ ಖಾತೆಯನ್ನು ನೀಡಲಾಗಿದೆ.

 ಪ್ರಮಾಣ ವಚನ ಸಮಾರಂಭಕ್ಕೆ ಉದಯನಿಧಿಯವರ ತಾಯಿ ದುರ್ಗಾ ಸ್ಟಾಲಿನ್ ಸಹ ಬಂದಿದ್ದರು. 

ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ಹಾಗೂ ಮೈತ್ರಿ ಪಕ್ಷಗಳ ಮುಖಂಡರು ಭಾಗವಹಿಸಿದ್ದರು.



Join Whatsapp