ಹೊಸ ಸಂಸತ್ ಭವನದ ಉದ್ಘಾಟನೆಗೆ ರಾಷ್ಟ್ರಪತಿ ಮುರ್ಮು ಅವರನ್ನೇಕೆ ಆಹ್ವಾನಿಸಲಿಲ್ಲ: ಇದೇ ಸನಾತನ ಧರ್ಮ ಎಂದ ಉದಯನಿಧಿ

Prasthutha|

- Advertisement -

ನವದೆಹಲಿ: ನೂತನ ಸಂಸತ್ ಭವನದ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೇಕೆ ಆಹ್ವಾನ ನೀಡಲಿಲ್ಲ ಎಂದು ತಮಿಳು ನಾಡು ಸಚಿವ ಉದಯನಿಧಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ಮಧುರೈನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ದೇಶದ ಪ್ರಥಮ ಪ್ರಜೆ ಯಾರು? ರಾಷ್ಟ್ರಪತಿ ಅಂದರೆ ದ್ರೌಪದಿ ಮುರ್ಮು. ಹೊಸ ಸಂಸತ್ ಭವನ ಉದ್ಘಾಟನಾ ಸಮಾರಂಭಕ್ಕೆ ಅವರನ್ನು ಆಹ್ವಾನಿಸಿಲ್ಲ ಏಕೆಂದರೆ ಅವರು ಬುಡಕಟ್ಟು ಸಮುದಾಯಕ್ಕೆ ಸೇರಿದವರು ಹಾಗೂ ವಿಧವೆ ಎಂಬ ಕಾರಣಕ್ಕೆ, ಇದನ್ನೇ ಸನಾತನ ಧರ್ಮ ಎಂದು ಕರೆಯುತ್ತೇವೆಯೇ ಎಂದು ಪ್ರಶ್ನಿಸಿದ್ದಾರೆ.

- Advertisement -

ಸ್ಮಾರಕ ಯೋಜನೆಯಡಿ 800 ಕೋಟಿ ರೂಪಾಯಿ ವೆಚ್ಚ ಮಾಡಿ ನೂತನ ಸಂಸತ್ತನ್ನು ನಿರ್ಮಿಸಲಾಗಿದೆ. ತಮಿಳುನಾಡಿನಿಂದ ಅಧೀನಮ್ ಅವರನ್ನು ಕರೆಸಿದರು. ಆದರೆ ಅದರ ಉದ್ಘಾಟನೆಗೆ ರಾಷ್ಟ್ರಪತಿಯನ್ನು ಆಹ್ವಾನಿಸಲಿಲ್ಲ. ಮಹಿಳಾ ಮೀಸಲಾತಿ ಮಸೂದೆ ಮಂಡನೆ ವೇಳೆ ಕೆಲ ಹಿಂದಿ ನಟಿಯರನ್ನು ಆಹ್ವಾನಿಸಿರುವ ವಿಚಾರವನ್ನೂ ಸ್ಟಾಲಿನ್ ಪ್ರಸ್ತಾಪಿಸಿದರು. ಇಷ್ಟು ಮಹತ್ವದ ವಿಧೇಯಕ ಮಂಡನೆ ವೇಳೆಯೂ ರಾಷ್ಟ್ರಪತಿಗೆ ಆಹ್ವಾನ ನೀಡಿಲ್ಲ. ಇವೆಲ್ಲವೂ ಸನಾತನ ಧರ್ಮದ ಪ್ರಭಾವದಿಂದ ಆಗಿವೆ ಎಂದರು.



Join Whatsapp