ವಿಶ್ವಕಪ್ 2023:  ರಜನಿಕಾಂತ್‌ಗೆ ಗೋಲ್ಡನ್ ಟಿಕೆಟ್ ನೀಡಿ ಗೌರವಿಸಿದ ಬಿಸಿಸಿಐ

Prasthutha|

ಹೊಸದಿಲ್ಲಿ: ಮುಂದಿನ ತಿಂಗಳಿನಿಂದ ಪ್ರಾರಂಭವಾಗುವ ಐಸಿಸಿ ವಿಶ್ವಕಪ್ 2023 ವೀಕ್ಷಿಸಲು ರಜನಿಕಾಂತ್ ಅವರಿಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ಗೋಲ್ಡನ್ ಟಿಕೆಟ್ ನೀಡಿ ಗೌರವಿಸಿದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ರಜನಿಯನ್ನು ಭೇಟಿ ಮಾಡಿ ಈ ಗೌರವದ ಟಿಕೆಟ್ ಅನ್ನು ನೀಡಿದ್ದಾರೆ.

- Advertisement -

ಟಿಕೆಟ್ ಪಡೆದ ನಂತರ ಸೋಷಿಯಲ್ ಮೀಡಿಯಾ ಮೂಲಕ ಕೃತಜ್ಞತೆಯನ್ನು ಸಲ್ಲಿಸಿರುವ ರಜನಿಕಾಂತ್, ಇಂಥದ್ದೊಂದು ಗೌರವ ಸಿಕ್ಕಿದು ಖುಷಿಯಾಗಿದೆ ಎಂದು ಹೇಳಿದ್ದಾರೆ. ಬಿಡುವು ಮಾಡಿಕೊಂಡು ಕ್ರಿಕೆಟ್ ನೋಡುವುದಾಗಿಯೂ ತಿಳಿಸಿದ್ದಾರೆ.

ಈ ಟಿಕೆಟ್ ಪಡೆದವರಿಗೆ ವಿಶೇಷ ಆತಿಥ್ಯವನ್ನು ನೀಡಲಾಗುತ್ತದೆ. ಈ ಹಿಂದೆ ಅಮಿತಾಭ್ ಬಚ್ಚನ್, ಸಚಿನ್ ತೆಂಡೂಲ್ಕರ್ ಸೇರಿದಂತೆ ಹಲವರಿಗೆ ಬಿಸಿಸಿಐ ಗೋಲ್ಡನ್ ಟಿಕೆಟ್ ನೀಡಿತ್ತು.

Join Whatsapp