ಸಿದ್ದೀಕ್ ಕಾಪ್ಪನ್, ಇತರ 7 ಮಂದಿಯ ಯುಎಪಿಎ ಪ್ರಕರಣ ಎನ್.ಐ.ಎ ನ್ಯಾಯಾಲಯಕ್ಕೆ ವರ್ಗಾವಣೆ

Prasthutha|

ಲಕ್ನೋ: ಕೇರಳದ ಪತ್ರಕರ್ತ ಸಿದ್ದೀಕ್ ಕಾಪ್ಪನ್, ಇತರ ಎಳು ಮುಸ್ಲಿಮರ ವಿರುದ್ಧ ಯುಎಪಿಎ ಕಾಯ್ದೆ ಅಡಿಯಲ್ಲಿ ದಾಖಲಾಗಿದ್ದ ಪ್ರಕರಣವನ್ನು ಲಕ್ನೋದ ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್.ಐ.ಎ) ನ್ಯಾಯಾಲಯಕ್ಕೆ ವರ್ಗಾಯಿಸಿದೆ.

- Advertisement -

ಹತ್ರಾಶ್ ಘಟನೆಗೆ ಸಂಬಂಧಿಸಿದಂತೆ ಸತ್ಯಶೋಧನ ವರದಿ ತಯಾರಿಸಲು ಮಥುರಾಕ್ಕೆ ತೆರಳಿದ್ದ ಕೇರಳ ಮೂಲದ ಪತ್ರಕರ್ತ ಸಿದ್ದೀಕ್ ಕಾಪ್ಪನ್ ಜೊತೆಗೆ ವಿದ್ಯಾರ್ಥಿ ಸಂಘಟನೆಯಾದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ನಾಯಕರಾದ ಅತೀಕುರ್ರಹ್ಮಾನ್, ಮಸೂದ್ ಅಹ್ಮದ್, ರೌಫ್ ಶರೀಫ್, ಪಿ.ಎಫ್.ಐ ಕಾರ್ಯಕರ್ತರಾದ ಅನ್ಸಾದ್ ಬದ್ರುದ್ದೀನ್, ಫಿರೋಝ್ ಮತ್ತು ಟ್ಯಾಕ್ಸಿ ಚಾಲಕ ಮುಹಮ್ಮದ್ ಆಲಮ್ ಎಂಬವರನ್ನು ಯುಎಪಿಎ ಪ್ರಕರಣದಲ್ಲಿ ಬಂಧಿಸಿ ಜೈಲಿನಲ್ಲಿರಿಸಲಾಗಿತ್ತು.

ಈ ಕುರಿತು ಪ್ರತಿಕ್ರಿಯಿಸಿದ ಕಾಪ್ಪನ್ ಪರ ಹಿರಿಯ ವಕೀಲರಾದ ವಿಲ್ಸ್ ಮ್ಯಾಥ್ಯೂಸ್, ಪ್ರಕರಣದ ತಾಂತ್ರಿಕ ಅಂಶಗಳನ್ನು ಪರಿಶೀಲನೆ ನಡೆಸಿದ್ದೇವೆ ಎಂದು ತಿಳಿಸಿದರು.

- Advertisement -

ಈ ವರ್ಷದ ಸೆಪ್ಟೆಂಬರ್ ನಲ್ಲಿ ಬಂಧಿತ ಪತ್ರಕರ್ತ ಸಿದ್ದೀಕ್ ಕಾಪ್ಪನ್ ಅವರ ವೈದ್ಯಕೀಯ ಹಕ್ಕನ್ನು ಉತ್ತರ ಪ್ರದೇಶ ಸರ್ಕಾರದ ಅಧಿಕಾರಿಗಳು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಕೇರಳದ ಕಾರ್ಯನಿರತ ಪತ್ರಕರ್ತರ ಒಕ್ಕೂಟ ಸುಪ್ರೀಮ್ ಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.

Join Whatsapp