ದುಬೈ: ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ದೇಶ ಮತ್ತು ಅಲ್ಲಿನ ನಿವಾಸಿಗಳನ್ನು ಸುರಕ್ಷಿತವಾಗಿಡಲು ತಾನು ಜಾರಿಗೆ ತಂದ ಸುಮಾರು ಎರಡೂವರೆ ವರ್ಷಗಳ ಕಟ್ಟುನಿಟ್ಟಾದ ಕೋವಿಡ್-19 ನಿರ್ಬಂಧ ಮತ್ತು ಮುನ್ನೆಚ್ಚರಿಕೆ ನಿಯಮಗಳನ್ನು ಹಿಂಪಡೆದಿರುವುದಾಗಿ ಯುಎಇ ಘೋಷಿಸಿದೆ.
ಮಾಸ್ಕ್ ಧರಿಸುವ ನಿಯಮಗಳನ್ನು ಮತ್ತಷ್ಟು ಸಡಿಲಿಸಲಾಗಿದೆ. ಆರಾಧನಾಲಯ ಮತ್ತು ಮಸೀದಿಗಳು ಸೇರಿದಂತೆ ಎಲ್ಲಾ ತೆರೆದ, ಮುಚ್ಚಿದ ಸ್ಥಳಗಳಲ್ಲಿ ಮಾಸ್ಕ್ ಐಚ್ಛಿಕವಾಗಿರುತ್ತದೆ ಎಂದು ಆರೋಗ್ಯ ಅಧಿಕಾರಿಗಳು ಘೋಷಿಸಿದ್ದಾರೆ.ಆದಾಗ್ಯೂ ಆರೋಗ್ಯ ಸೌಲಭ್ಯಗಳು ಲಭಿಸುವ ಸ್ಥಳ ಮತ್ತು ಸಾರ್ವಜನಿಕ ಕೇಂದ್ರಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿರುತ್ತದೆ. ಮಸೀದ್ ಮತ್ತು ಇತರ ಆರಾಧನಾ ಸ್ಥಳಗಳಲ್ಲಿ ವೈಯಕ್ತಿಕ ಮ್ಯಾಟ್ ಮೇಲೆ ಪ್ರಾರ್ಥನೆ ಮಾಡುವುದು ಐಚ್ಛಿಕವಾಗಿರುತ್ತದೆ.
ನವೆಂಬರ್ 7ರ ಸೋಮವಾರ ಬೆಳಗ್ಗೆ 6 ಗಂಟೆಗೆ ಹೊಸ ಸಡಿಲಿಕೆಯು ಜಾರಿಗೆ ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.