ಇಸ್ರೇಲ್ ಜೊತೆಗಿನ ವೀಸಾ ವಿನಾಯ್ತಿ ಒಪ್ಪಂದ ಅಮಾನತುಗೊಳಿಸಿದ ಯುಎಇ

Prasthutha|

ಟೆಲ್ ಅವೀವ್ : ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಇಸ್ರೇಲ್ ಜೊತೆಗಿನ ವೀಸಾ ವಿನಾಯ್ತಿ ನೀತಿಯನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿದೆ. ಕೊರೊನ ವೈರಸ್ ಭೀತಿಯಿಂದ ಇಸ್ರೇಲ್  ಜೊತೆಗಿನ ವೀಸಾ ವಿನಾಯ್ತಿ ನೀತಿ ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ ಎಂದು ಇಸ್ರೇಲಿ ವಿದೇಶಾಂಗ ಸಚಿವಾಲಯ ತಿಳಿಸಿದೆ.

- Advertisement -

ಕೊರೊನ ವೈರಸ್ ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ, ಯುಎಇ ಇಸ್ರೇಲ್ ಜೊತೆಗಿನ ಒಪ್ಪಂದವನ್ನು ಜು.1ರ ವರೆಗೆ ಅಮಾನತುಗೊಳಿಸಿದೆ ಎಂದು ವರದಿಗಳು ತಿಳಿಸಿವೆ.

ಸಾರ್ವಜನಿಕ ಆರೋಗ್ಯದ ಭೀತಿಯಲ್ಲಿ ಒಪ್ಪಂದ ಅಮಾನತುಗೊಳಿಸಬಹುದಾದ ನಿಯಮನುಸಾರ ಈ ಕ್ರಮ ಕೈಗೊಳ್ಳಲಾಗಿದೆ. ಯುಎಇ ಭಾರತ, ಪಾಕಿಸ್ತಾನ ಮತ್ತು ಇತರ ಯುರೋಪ್ ರಾಷ್ಟ್ರಗಳ ವಿರುದ್ಧವೂ ಯುಎಇ ಇಂತಹುದೇ ಕ್ರಮಗಳನ್ನು ಕೈಗೊಂಡಿದೆ ಎಂದು ಇಸ್ರೇಲಿ ವಿದೇಶಾಂಗ ಸಚಿವಾಲಯ ತಿಳಿಸಿದೆ.



Join Whatsapp