ಕ್ಷಮೆಯಾಚಿಸಿದರೆ ಸಾಲದು, ಜೈಲಿಗೆ ಹೋಗಬೇಕು ; ತಾಂಡವ್ ವಿರುದ್ಧ ಬಿಜೆಪಿ

Prasthutha|

- Advertisement -

ತಾಂಡವ್ ವೆಬ್ ಸಿರೀಸ್ ವಿರುದ್ಧ ಬಿಜೆಪಿ ತನ್ನ ಪ್ರತಿಭಟನೆಯನ್ನು ತೀವ್ರಗೊಳಿಸಲು ಸಜ್ಜಾಗಿದೆ. ಕ್ಷಮೆಯಾಚಿಸಿದರೆ ಅದು ಸ್ವೀಕಾರಾರ್ಹವಲ್ಲ,ಇದು ಕ್ಷಮಿಸಲಾಗದ ತಪ್ಪು ಎಂದು ಬಿಜೆಪಿ ಹೇಳಿದೆ. “ನಾವು ಕಳೆದ 5 ದಿನಗಳಿಂದ ಅಮೆಜಾನ್‌ನೊಂದಿಗೆ ನಿರಂತರ ಚರ್ಚೆಯಲ್ಲಿದ್ದೇವೆ. ಅನೇಕ ರಾಜಕೀಯ ನಾಯಕರು ಅವರ ಮೇಲೆ ಒತ್ತಡ ಹೇರುತ್ತಿದ್ದರು. ಅದರ ಪರಿಣಾಮವಾಗಿ ತಾಂಡವ್ ತಂಡ ಸಾರ್ವಜನಿಕವಾಗಿ ಕ್ಷಮೆಯಾಚಿಸಿದೆ. ಆದರೆ ನಾನು ಒಂದು ವಿಷಯವನ್ನು ಸ್ಪಷ್ಟಪಡಿಸುತ್ತೇನೆ, ನಿಮ್ಮ ಕ್ಷಮೆಯಾಚನೆ ಸ್ವೀಕಾರಾರ್ಹವಲ್ಲ. ನಿಮ್ಮನ್ನು ಜೈಲಿಗೆ ಕಳುಹಿಸುವವರೆಗೂ ನಮಗೆ ವಿಶ್ರಾಂತಿ ಇಲ್ಲ” ಎಂದು ಬಿಜೆಪಿ ನಾಯಕ ರಾಮ್ ಕದಮ್ ಹೇಳಿದ್ದಾರೆ.

ಉದ್ಧವ್ ಠಾಕ್ರೆ ನೇತೃತ್ವದ ಸರಕಾರ ಹಿಂದೂಗಳ ಭಾವನೆಗಳನ್ನು ಎಚ್ಚರಿಸುವ ಸಮಯ ಕಳೆದು ಹೋಗಿದೆ ಎಂದು ಬಿಜೆಪಿ ಮಾಧ್ಯಮ ಘಟಕದ ಮುಖ್ಯಸ್ಥ ವಿಶ್ವಾಸ್ ಪಾಠಕ್ ಹೇಳಿದ್ದಾರೆ. ಈ ಹಿಂದೆ ಉತ್ತರಪ್ರದೇಶದ ಪೊಲೀಸರು ತಾಂಡವ್ ತಂಡ ಮತ್ತು ಅಮೆಜಾನ್ ಪ್ರೈಮ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು. ವಿವಾದದ ಬಗ್ಗೆ ಸುದ್ದಿ ಮತ್ತು ಪ್ರಸಾರ ಸಚಿವಾಲಯ ಅಮೆಜಾನ್ ಪ್ರೈಮ್‌ನಿಂದ ವಿವರಣೆ ಕೋರಿದೆ. ಧಾರವಾಹಿಯ ವಿರುದ್ಧ ಬಿಜೆಪಿ ಮುಖಂಡರಿಂದ ದೂರುಗಳು ಬಂದ ನಂತರ ವಿವರಣೆಯನ್ನು ಕೋರಲಾಗಿದೆ. ಸಮಕಾಲೀನ ರಾಜಕೀಯ ಘಟನೆಗಳ ಕಥೆಯನ್ನು ಹೇಳುವ ಈ ಚಿತ್ರವು ಉದ್ದೇಶಪೂರ್ವಕವಾಗಿ ಹಿಂದೂ ದೇವತೆಗಳನ್ನು ಅಪಹಾಸ್ಯ ಮಾಡಿದೆ ಮತ್ತು ಧಾರ್ಮಿಕ ಭಾವನೆಗಳನ್ನು ಅವಮಾನಿಸಿದೆ ಎಂದು ಆರೋಪಿಸಲಾಗಿದೆ.

Join Whatsapp