UAE: KSCC ವತಿಯಿಂದ ಯಶಸ್ವಿ ರಕ್ತದಾನ ಶಿಬಿರ

Prasthutha|

ದುಬೈ: ಕರ್ನಾಟಕ ಸ್ಪೋರ್ಟ್ಸ್ ಆಂಡ್ ಕಲ್ಚರಲ್ ಕ್ಲಬ್ ( KSCC) ಹಾಗೂ ಬ್ಲಡ್ ಡೊನೇಷನ್ ಸೆಂಟರ್ (ದುಬೈ ಹೆಲ್ತ್ ಅಥಾರಿಟಿ) ಇದರ ಜಂಟಿ ಆಶ್ರಯದಲ್ಲಿ ಸಾರ್ವಜನಿಕ ರಕ್ತದಾನ ಶಿಬಿರ ಕಾರ್ಯಕ್ರಮವು ದಿನಾಂಕ 06 ಫೆಬ್ರವರಿ  2022 ನೇ  ಆದಿತ್ಯವಾರದಂದು ದುಬೈ ಲತೀಫಾ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ನಲ್ಲಿ ಯಶಸ್ವಿಯಾಗಿ ನಡೆಯಿತು.

- Advertisement -

ಶಿಬಿರದ ಮುಖ್ಯ ಅತಿಥಿಯಾಗಿ KSCC  ಅಧ್ಯಕ್ಷರಾದ ಮುಹಮ್ಮದ್ ಇಸ್ಮಾಯಿಲ್, ಕಾರ್ಯದರ್ಶಿ ಮೊಹಮ್ಮದ್ ಶಾಫಿ , ಇಂನ್ಚಾರ್ಜ್  ಇರ್ಷಾದ್ ಸುರತ್ಕಲ್, ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಈ ರಕ್ತದಾನ ಶಿಬಿರದಲ್ಲಿ ಹತ್ತಾರು ರಕ್ತದಾನಿಗಳು ಆಗಮಿಸಿ ರಕ್ತದಾನ ಮಾಡುವುದರ ಮೂಲಕ ಜೀವದಾನಿಗಳಾದರು.

- Advertisement -

ರಕ್ತದಾನ ಮಾಡಿ ಮಾನವೀಯತೆ ಮೆರೆದ ಅನಿವಾಸಿ ಭಾರತೀಯ ಸರ್ವ ಸಹೃದಯೀ ದಾನಿಗಳಿಗೂ,ರಕ್ತನಿಧಿಯ ಸಿಬ್ಬಂದಿ ವರ್ಗಕ್ಕೂ, ಮತ್ತು ಕಾರ್ಯಕ್ರಮದ ಯಶಸ್ವಿಗಾಗಿ ಹಗಲಿರುಳು ಶ್ರಮಿಸಿದ ಎಲ್ಲಾ ಸಂಘ ಸಂಸ್ಥೆಗಳ ಎಲ್ಲಾ ಕಾರ್ಯಕರ್ತರಿಗೂ,ಮಾಧ್ಯಮ ಪ್ರತಿನಿಧಿಗಳಿಗೂ  ಸಂಸ್ಥೆಯ ಪರವಾಗಿ ಕೃತಜ್ಞತೆಗಳು ಸಲ್ಲಿಸಲಾಯಿತು.ರಕ್ತದಾನದಲ್ಲಿ ಭಾಗವಹಿಸಿದ ಎಲ್ಲಾ ರಕ್ತದಾನಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು.

ಕಾರ್ಯಕ್ರಮದಲ್ಲಿ KSCC ಕಾರ್ಯಕರ್ತರು ಹಾಗೂ ಲತೀಫಾ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು  ಇರ್ಷಾದ್ ನಿರೂಪಿಸಿದರು ಮತ್ತು ಜಂಶೀದ್ ಸುರತ್ಕಲ್ ಸ್ವಾಗತಿಸಿ ವಂದಿಸಿದರು.

Join Whatsapp