ಖಾಸಗಿ ಕಂಪೆನಿಗಳಿಗೆ 10 ಶೇಕಡಾ ಔದ್ಯೋಗಿಕ ರಾಷ್ಟ್ರೀಕರಣ ಕೋಟಾವನ್ನು ನಿಗದಿಪಡಿಸಿದ ಯುಎಇ

Prasthutha|

ದುಬೈ: ಯುಎಇ ಸರ್ಕಾರ ತನ್ನ ಆರ್ಥಿಕ ಸುಧಾರಣೆ ಮಾಡುವ ನಿಟ್ಟಿನಲ್ಲಿ ಖಾಸಗಿ ಕಂಪೆನಿಗಳ ಉದ್ಯೋಗಗಳಲ್ಲಿ ಎಮಿರೇಟ್ಸ್ ನಾಗರಿಕರಿಗೆ ಶೇಕಡಾ 10 ರಷ್ಟು ಮೀಸಲಾತಿಯನ್ನು ನಿಗದಿಪಡಿಸಿದೆ.

- Advertisement -

ಮುಂದಿನ ಐದು ವರ್ಷಗಳಲ್ಲಿ ಈ ನಿಯಮವನ್ನು ಜಾರಿಗೊಳಿಸಲಾಗುವುದು. ಮೊದಲ ವರ್ಷ ಶೇಕಡಾ 2ರ ಅನುಪಾತದಲ್ಲಿ ಈ ನಿಯಮವನ್ನು ಪ್ರಾರಂಭಿಸಲಾಗುವುದೆಂದು ಎಮಿರೇಟ್ಸ್ ಕ್ಯಾಬಿನೆಟ್ ವ್ಯವಹಾರಗಳ ಸಚಿವ ಮುಹಮ್ಮದ್ ಅಬ್ದುಲ್ಲಾ ಅಲ್- ಗೆರ್ಗಾವಿ ತಿಳಿಸಿದರು.

ನುರಿತ ಕಾರ್ಮಿಕರಿಗೆ ಅನ್ವಯಿಸುವ ಈ ಕಾನೂನು 2026 ರ ವೇಳೆಗೆ ಗುರಿ ಸಾಧಿಸಲು ಸರ್ಕಾರವು ಖಾಸಗಿ ವಲಯದ ಕಂಪೆನಿಗಳೊಂದಿಗೆ ನಿಕಟವಾಗಿ ಕೆಲಸ ನಿರ್ವಹಿಸಲಿದೆ.

- Advertisement -

ಪ್ರಸಕ್ತ ಔದ್ಯೊಗಿಕ ರಾಷ್ಟ್ರೀಕರಣವನ್ನು ಸಮಸ್ಯೆಯಾಗಿ ನೋಡುವುದಿಲ್ಲ, ಆದರೆ ಸ್ಪರ್ಧಾತ್ಮಕವಾದ ಪ್ರಯೋಜನಕಾರಿಯಾಗಿ ಪರಿಗಣಿಸುತ್ತೇವೆ ಎಂದು ಯುಎಇ ನ ಅತಿದೊಡ್ಡ ಕಂಪೆನಿಯಲ್ಲಿ ಒಂದಾದ ಅಲ್ ಫುಟ್ಟೈಮ್ ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಲೈನ್ ಬೆಜ್ಜನಿ ಮಾಧ್ಯಮಕ್ಕೆ ತಿಳಿಸಿದರು.

ಯುಎಇ ನಾಗರಿಕರಿಗೆ 75 ಸಾವಿರ ಖಾಸಗಿ ವಲಯದ ಉದ್ಯೋಗಗಳು ಸೃಷ್ಟಿಸಲು ಸುಮಾರು 24 ಬಿಲಿಯನ್ ದಿರ್ಹಂ ಗಳನ್ನು ಮೀಸಲಿರಿಸಿದೆ.

Join Whatsapp