ಯುಎಇ: ಅಬುಧಾಬಿ ಸಾಪ್ತಾಹಿಕ ಡ್ರಾದಲ್ಲಿ 2 ಕೋಟಿ ರೂ. ಗೆದ್ದ ಅನಿವಾಸಿ ಭಾರತೀಯ !

Prasthutha|

ದುಬೈ: ಅಬುಧಾಬಿ ಸಾಪ್ತಾಹಿಕ ಬಿಗ್ ಟಿಕೆಟ್ ಡ್ರಾದಲ್ಲಿ ಭಾರತೀಯನಿಗೆ ಒಂದು ಮಿಲಿಯನ್ ದಿರ್ಹಂ ( 2 ಕೋಟಿ ರೂ.) ಬಹುಮಾನ ಲಭಿಸಿದೆ.

- Advertisement -

ಟಿಕೆಟ್ ಸಂಖ್ಯೆ 135561 ಹೊಂದಿದ್ದ ಭಾರತೀಯ ಮೂಲದ ಮುಹಮ್ಮದ್ ರಫೀಕ್ ಅಹ್ಮದ್ ಅವರನ್ನು ವಿಜೇತ ಎಂದು ಘೋಷಿಸಲಾಯಿತು.

ಡಿಸೆಂಬರ್ ನಲ್ಲಿ ಪ್ರತಿ ವಾರ ಒಬ್ಬ ವ್ಯಕ್ತಿಗೆ 2 ಕೋಟಿ ಗೆಲ್ಲುವ ಅವಕಾಶ ನೀಡಲಾಗಿದೆ ಎಂದು ಬಿಗ್ ಟಿಕೆಟ್ ಸಂಸ್ಥೆ ಘೋಷಿಸಿತ್ತು. ಮುಂದಿನ ಸಾಪ್ತಾಹಿಕ ಮಿಲಿಯನೇರ್ ಡ್ರಾ ಡಿಸೆಂಬರ್ 24 ರಂದು ನಡೆಯಲಿದೆ.

Join Whatsapp