ರಾಜಕೀಯ ಪ್ರವೇಶ ಘೋಷಿಸಿದ ರೈತ ನಾಯಕ

Prasthutha|

ರೈತ ಹೋರಾಟದ ಬಳಿಕ ಉದಯವಾದ ಮೊದಲ ರಾಜಕೀಯ ಪಕ್ಷ

- Advertisement -

ಹೊಸದಿಲ್ಲಿ: ವಿವಾದಿತ ಕೃಷಿ ಕಾನೂನುಗಳ ವಿರುದ್ಧ ಹೋರಾಟದ ವಿಜಯದ ನಂತರ ರೈತ ನಾಯಕ ಗುರ್ನಾಮ್ ಸಿಂಗ್ ಚಾಧುನಿ ರಾಜಕೀಯಕ್ಕೆ ಎಂಟ್ರಿ ನೀಡುವುದಾಗಿ ಘೋಷಿಸಿದ್ದಾರೆ.

ಶನಿವಾರ ಅಧಿಕೃತವಾಗಿ ರಾಜಕೀಯ ಪಕ್ಷವನ್ನು ಘೋಷಿಸುವುದಾಗಿ ಗುರ್ನಾಮ್ ಹೇಳಿದ್ದಾರೆ. ಭಾರತೀಯ ಕಿಸಾನ್ ಒಕ್ಕೂಟದ ಹರಿಯಾಣ ರಾಜ್ಯದ ಅಧ್ಯಕ್ಷರಾದ ಅವರು, ಹರಿಯಾಣ ಮತ್ತು ಪಂಜಾಬ್‌ನಲ್ಲಿ ರೈತರನ್ನು ಸಂಘಟಿಸಿದವರಾಗಿದ್ದಾರೆ.

- Advertisement -

ರೈತ ಹೋರಾಟದ ಗೆಲುವಿನ ನಂತರ ರಚನೆಯಾಗುವ ಮೊದಲ ರಾಜಕೀಯ ಪಕ್ಷ ಇದಾಗಿದೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಾದಿತ ಕೃಷಿ ಕಾಯ್ದೆ ವಿರೋಧಿಸಿ ಒಂದು ವರ್ಷಕ್ಕೂ ಹೆಚ್ಚು ಕಾಲ ಪ್ರತಿಭಟನೆ ನಡೆಸುತ್ತಿದ್ದ ರೈತರು ಡಿ.9ರಂದು ಧರಣಿ ಅಂತ್ಯಗೊಳಿಸಿದ್ದರು. ಪ್ರತಿಭಟನೆಗೆ ಮಣಿದು ಕೇಂದ್ರ ಸರ್ಕಾರ ಕಾನೂನನ್ನು ಹಿಂಪಡೆದಾಗ ಮುಷ್ಕರ ಅಂತ್ಯಗೊಳಿಸಿದ್ದ ರೈತರು ತಮ್ಮ ತಾಯ್ನಾಡಿಗೆ ಮರಳಿದ್ದರು.

Join Whatsapp