UAE ಮೂಲದ ಅನಿವಾಸಿ ಭಾರತೀಯರಿಗೆ ದೀರ್ಘಾವಧಿ ವೀಸಾ ಮಂಜೂರು ಮಾಡಿದ ಒಮಾನ್ ಸರ್ಕಾರ

Prasthutha|

ಮಸ್ಕತ್: ಯುನೈಟೆಡ್ ಅರಬ್ ಎಮಿರೇಟ್ಸ್ ಮೂಲದ ಭಾರತೀಯ ಉದ್ಯಮಿಗಳಾದ ಶಂಶೀರ್ ವಯಲೀಲ್ ಪರಂಬತ್ ಮತ್ತು ಲೂಲು ಗ್ರೂಪ್ ಆಫ್ ಕಂಪೆನಿ ಅಬುಧಾಬಿ ಚೇಂಬರ್ ನ ಎಂ.ಎ. ಯೂಸುಫ್ ಅಲಿ ಅವರಿಗೆ ಒಮಾನ್ ಸರ್ಕಾರ ಬುಧವಾರ ದೀರ್ಘಾವಧಿ ರೆಸಿಡೆನ್ಸಿ ವೀಸಾವನ್ನು ಮಂಜೂರು ಮಾಡಿದೆ.

- Advertisement -

ಟ್ವಿಟ್ಟರ್ ಮೂಲಕ ಪ್ರತಿಕ್ರಿಯಿಸಿದ ಶಂಶೀರ್ ವಯಲೀಲ್ ಪರಂಬತ್, “ವೀಸಾ ಒದಗಿಸಿದಕ್ಕಾಗಿ ಒಮಾನ್ ಸರ್ಕಾರಕ್ಕೆ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತಿದ್ದೇನೆ. ಈ ಹೆಮ್ಮೆಯ ಕ್ಷಣದಲ್ಲಿ ಓಮಾನ್ ಸರ್ಕಾರ ಮತ್ತು ಕೈಸ್ ಬಿನ್ ಮುಹಮ್ಮದ್ ಅಲ್ ಯೂಸೆಫ್ ಅವರಿಗೆ ಅಭಿನಂದನೆ ಸಲ್ಲಿಸುತ್ತಿದ್ದೇನೆ” ಎಂದಿದ್ದಾರೆ.

ಇಂದು ಮಸ್ಕತ್ ನಲ್ಲಿ ನಡೆದ ಸಮಾರಂಭದಲ್ಲಿ ವಾಣಿಜ್ಯೋದ್ಯಮ, ಕೈಗಾರಿಕೆ ಮತ್ತು ಹೂಡಿಕೆ ಸಚಿವ ಕೈಸ್ ಬಿನ್ ಮುಹಮ್ಮದ್ ಅಲ್ ಯೂಸೆಫ್ ಅವರಿಂದ ಭಾರತೀಯ ಉದ್ಯಮಿಗಳಿಗೆ 10 ವರ್ಷಗಳ ರೆಸಿಡೆನ್ಸಿ ವೀಸಾವನ್ನು ಮಂಜೂರು ಮಾಡಿದರು. ಈ ಸಂದರ್ಭದಲ್ಲಿ 22 ಹೂಡಿಕೆದಾರರಿಗೆ ಸರ್ಕಾರಿ ಅಧಿಕಾರಿಗಳ ಸಮ್ಮುಖದಲ್ಲಿ ವೀಸಾವನ್ನು ಹಸ್ತಾಂತರಿಸಲಾಯಿತು.

- Advertisement -

ಒಮಾನ್ ಸರ್ಕಾರ ಹೂಡಿಕೆ ಮಾಡುವವರಿಗೆ 5 ರಿಂದ 10 ವರ್ಷಗಳ ವೀಸಾವನ್ನು ಮಂಜೂರು ಮಾಡುವ ಗುರಿಯನ್ನು ಹೊಂದಿದೆ ಎಂದು ಒಮಾನ್ ಸರ್ಕಾರ ತಿಳಿಸಿದೆ.



Join Whatsapp