ಉ.ಪ್ರದೇಶ: ಎಸ್‌ಪಿ ಪ್ರಧಾನ ಕಾರ್ಯದರ್ಶಿ ಆಝಂ ಖಾನ್‌‌ಗೆ 7 ವರ್ಷ ಜೈಲು

Prasthutha|

ಲಖನೌ: ಸಮಾಜವಾದಿ ಪಕ್ಷದ (ಎಸ್‌ಪಿ) ಪ್ರಧಾನ ಕಾರ್ಯದರ್ಶಿ, ರಾಂಪುರದಿಂದ 10 ಬಾರಿ ಶಾಸಕರಾಗಿದ್ದ ಆಝಂ ಖಾನ್‌‌ಗೆ ಉತ್ತರ ಪ್ರದೇಶದ ರಾಂಪುರ ಪಟ್ಟಣದ ನ್ಯಾಯಾಲಯ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 2019ರಲ್ಲಿ ದಾಖಲಾದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಈ ಶಿಕ್ಷೆ ನೀಡಲಾಗಿದೆ.

- Advertisement -

ಈ ಪ್ರಕರಣದಲ್ಲಿ ಇತರ ಮೂವರಿಗೆ ಐದು ವರ್ಷಗಳ ಶಿಕ್ಷೆಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಧಿಸಿದೆ. ರಾಂಪುರ ಪುರಸಭೆ ಅಧ್ಯಕ್ಷ ಅಝರ್‌ ಅಹ್ಮದ್‌ ಖಾನ್‌, ರಾಂಪುರದ ಮಾಜಿ ಅಧಿಕಾರಿ (ಸಿಒ) ಅಲಿ ಹಸನ್‌ ಮತ್ತು ಗುತ್ತಿಗೆದಾರ ಬರ್ಕತ್‌ ಅಲಿ ಶಿಕ್ಷೆಗೊಳಗಾದವರು.

ಆಝಂ ಖಾನ್ ನಿರ್ದೇಶನದಂತೆ ಅಲಿ ಹಸನ್ ಮತ್ತು ಇತರರು ರಾಂಪುರ ಪಟ್ಟಣದ ಡುಂಗರ್‌ಪುರ ಬಸ್ತಿ ನಿವಾಸಿ ಎಹ್ತೆಶಾಮ್ ಎಂಬುವರ ಮನೆಗೆ ನುಗ್ಗಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಪ್ರಕರಣದಲ್ಲಿ ಆಜಂ ಖಾನ್ ವಿರುದ್ಧ ಕ್ರಿಮಿನಲ್ ಪಿತೂರಿ ಆರೋಪ ಹೊರಿಸಲಾಗಿತ್ತು.

- Advertisement -

ಕೆಲವು ತಿಂಗಳ ಹಿಂದಷ್ಟೇ ತನ್ನ ಮಗ ಅಬ್ದುಲ್ಲಾ ಆಝಂನ ನಕಲಿ ಜನನ ಪ್ರಮಾಣಪತ್ರದ ಪ್ರಕರಣದಲ್ಲಿ ಆಝಂ ಖಾನ್, ಅವರ ಪತ್ನಿ ತಂಝೀನ್ ಫಾತಿಮಾ ಮತ್ತು ಮಗ ಅಬ್ದುಲ್ಲಾ ಆಝಂ ಏಳು ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಿದ್ದಾರೆ.

Join Whatsapp