ಉ.ಪ್ರದೇಶ: ಮುಸ್ಲಿಂ ವ್ಯಕ್ತಿಯ ಖಾಸಗಿ ಅಂಗಕ್ಕೆ ಪಟಾಕಿ ಸಿಡಿಸಿ ಕೊಲೆ

Prasthutha|

ಗಾಝಿಯಾಬಾದ್: ಇಲ್ಲಿನ ಝಂದಾಪುರ ಪ್ರದೇಶದಲ್ಲಿ ದೀಪಾವಳಿ ಸಂಭ್ರಮದ ಆಚರಣೆಯ ವೇಳೆ ದುಷ್ಕರ್ಮಿಯೊಬ್ಬ 40 ವರ್ಷದ ವ್ಯಕ್ತಿಯೊಬ್ಬರ ಖಾಸಗಿ ಅಂಗಕ್ಕೆ ಪಟಾಕಿ ಸಿಡಿಸಿದ್ದು, ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಉತ್ತರಪ್ರದೇಶ ಪೊಲೀಸರು ತಿಳಿಸಿದ್ದಾರೆ.

- Advertisement -

ಘಟನೆ ನಿನ್ನೆ ಭಾನುವಾರ ನಡೆದಿದ್ದು, ಪ್ರದೀಪ್ ಎಂಬಾತ ಅಫ್ಜಲ್ ಅಲಿಯಾಸ್ ನಾಟು ಎಂಬವರ ಸೊಂಟದ ಕೆಳಗೆ ಕಬ್ಬಿಣದ ಪೈಪ್‌ನಿಂದ ಪಟಾಕಿ ಸಿಡಿಸಿದ್ದಾನೆ. ತೀವ್ರ ಗಾಯಗೊಂಡು ನರಳಿದ ಅಫ್ಜಲ್‌ ಆಸ್ಪತ್ರೆಗೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಸಾಹಿಬಾಬಾದ್ ಹೆಚ್ಚುವರಿ ಪೊಲೀಸ್ ಕಮಿಷನರ್ ಭಾಸ್ಕರ್ ವರ್ಮ ತಿಳಿಸಿದ್ದಾರೆ.

ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಪೊಲೀಸರಿಗೆ ಸಿಕ್ಕಿದ್ದು, ತಲೆಮರೆಸಿಕೊಂಡಿರುವ ಪ್ರದೀಪ್ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ಅಫ್ಜಲ್ ಮತ್ತು ಪ್ರದೀಪ್ ಪರಸ್ಪರ ಪರಿಚಿತರಾಗಿದ್ದರು ಎಂದು ಕೂಡ ಪೊಲೀಸ್ ಅಧಿಕಾರಿ ಹೇಳಿದ್ದಾರೆ. ಸ್ಥಳದಲ್ಲಿ ಪೊಲೀಸ್ ಪಡೆ ನಿಯೋಜಿಸಲಾಗಿದೆ.