ISL ಫೈನಲ್ ವೀಕ್ಷಿಸಲು ಕೇರಳದಿಂದ ಗೋವಾಕ್ಕೆ ಪ್ರಯಾಣಿಸುತ್ತಿದ್ದ ವೇಳೆ ಅಪಘಾತ: ಇಬ್ಬರು ಯುವಕರ ದಾರುಣ ಸಾವು

Prasthutha|

ಕಾಸರಗೋಡು: ಬೈಕ್ ಹಾಗೂ ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಯುವಕರು ಮೃತಪಟ್ಟ ದಾರುಣ ಘಟನೆ ಇಂದು ಮುಂಜಾನೆ ಉದುಮದ ಪಳ್ಳ ಎಂಬಲ್ಲಿ ನಡೆದಿದೆ.

- Advertisement -

ಮೃತ ವ್ಯಕ್ತಿಗಳನ್ನು ಮಲಪ್ಪುರಂ ನಿವಾಸಿಗಳಾದ ಜಂಶೀರ್(22) ಮತ್ತು ಮುಹಮ್ಮದ್ ಶಿಬಿಲ್ (20) ಎಂದು ಗುರುತಿಸಲಾಗಿದೆ.  ಗೋವಾದಲ್ಲಿ ನಡೆಯಲಿರುವ ಐ.ಎಸ್.ಎಲ್. ಫುಟ್ಬಾಲ್ ಫೈನಲ್ ಪಂದ್ಯವನ್ನು ವೀಕ್ಷಿಸಲು  ಬೈಕಿನಲ್ಲಿ ತೆರಳುತ್ತಿರುವ ವೇಳೆ  ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.

ಭಾನುವಾರ ಬೆಳಗಿನ ಜಾವ ಐದು ಗಂಟೆ ಸುಮಾರಿಗೆ ಅಪಘಾತ ಸಂಭವಿಸಿದ್ದು, ಕಾಸರಗೋಡು ಕಡೆಯಿಂದ ತೆರಳುತ್ತಿದ್ದ ಲಾರಿ ಬೈಕಿಗೆ ಡಿಕ್ಕಿ ಹೊಡದ ಪರಿಣಾಮ ಗಂಭೀರ ಗಾಯಗೊಂಡಿದ್ದ ಇಬ್ಬರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

- Advertisement -

ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.

Join Whatsapp