ರೈಲ್ವೇ ಫ್ಲಾಟ್ ಫಾರ್ಮ್ ನಲ್ಲಿ ಪ್ರಜ್ಞೆ ತಪ್ಪಿ ಬಿದ್ದ ತಾಯಿಯ ಬಳಿ ಪೊಲೀಸರನ್ನು ಕರೆತಂದ ಎರಡು ವರ್ಷದ ಮಗು

Prasthutha|

ಬರೇಲಿ : ಎರಡು ವರ್ಷದ ಪುಟ್ಟ ಹೆಣ್ಣು ಮಗುವೊಬ್ಬಳು ಮೊರಾದಾಬಾದ್ ರೈಲ್ವೇ ಫ್ಲಾಟ್ ಫಾರ್ಮಿನಲ್ಲಿ ತನ್ನ ತಾಯಿ ತನ್ನ ಆರು ತಿಂಗಳ ಪುಟ್ಟ ಮಗನ ಬಳಿ ಪ್ರಜ್ಞಾಹೀನಳಾಗಿ ಬಿದ್ದಿರುವುದನ್ನು ಗಮನಿಸಿ ಏನು ಮಾದುವುದೆಂದು ತೋಚದೆ ಸಹಾಯಕ್ಕಾಗಿ ಒಂದಷ್ಟು ದೂರ ನಡೆದು ಇನ್ನೊಂದು ಫ್ಲಾಟ್ ಫಾರ್ಮ್ ಗೆ ತಲುಪಿದ್ದಲು ಎನ್ನಲಾಗಿದೆ

- Advertisement -

ಫ್ಲಾಟ್ ಫಾರ್ಮ್ ನಲ್ಲಿ ಕರ್ತವ್ಯದಲ್ಲಿದ್ದ ಆರ್ ಪಿ ಎಫ್ ಜವಾನರ ಬಳಿ ಏನನ್ನೋ ಹೇಳಲು ಯತ್ನಿಸಿದಾಗ ಏನೋ ತಪ್ಪು ನಡೆದಿದೆ ಎಂದು ಸಂಶಯಗೊಂಡ ಪೊಲೀಸರು ಆಕೆಯನ್ನೇ ಹಿಂಬಾಲಿಸಿದಾಗ ಆಕೆ ತನ್ನ ತಾಯಿಯ ಬಳಿಗೆ ಕರೆದುಕೊಂಡು ಹೋಗಿದ್ದಾಳೆ. ಪೊಲೀಸರು ತಕ್ಷಣ ಅಂಬ್ಯುಲೆನ್ಸ್ ಕರೆಸಿ ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.

ಸುಮಾರು 30 ವರ್ಷ ಆಸುಪಾಸಿನ ಈ ಮಹಿಳೆಯ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ ಎಂದು timesofindia.com ವರದಿ ಮಾಡಿದೆ.



Join Whatsapp