ನೈಜ ಬಿಪಿಎಲ್ ಕಾರ್ಡುದಾರರು ಸೌಲಭ್ಯಗಳಿಂದ ವಂಚಿತರಾದ ಬಗ್ಗೆ ಉಸ್ತುವಾರಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿಯಿಂದ ಪ್ರಗತಿ ಪರಿಶೀಲನಾ ಸಭೆ

Prasthutha|

ಮಂಗಳೂರು: ನೈಜ ಬಿಪಿಎಲ್ ಕಾರ್ಡುದಾರರು ಸೌಲಭ್ಯಗಳಿಂದ ವಂಚಿತರಾದ ಬಗ್ಗೆ ಉಸ್ತುವಾರಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿಯವರ ಜೊತೆ ಶಾಸಕ ಡಾ.ಭರತ್ ಶೆಟ್ಟಿ, ಉಮಾನಾಥ್ ಕೋಟ್ಯಾನ್, ರಾಜೇಶ್ ನಾಯ್ಕ್ ಮತ್ತು ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು.

- Advertisement -

ಆದಾಯ ಪ್ರಮಾಣಪತ್ರ ತಿದ್ದುಪಡಿ ಮಾಡುವ ಸಮಯದಲ್ಲಿ ಕೆಲವೊಂದು ತಾಂತ್ರಿಕ ಸಮಸ್ಯೆಗಳಿಂದ ನೈಜ ಬಿಪಿಎಲ್ ಪಡಿತರ ಕಾರ್ಡುಗಳು ಎಪಿಎಲ್ ಆಗಿ ಜನಸಾಮಾನ್ಯರು ಸರಕಾರದ ಸೌಲಭ್ಯಗಳಿಂದ ವಂಚಿತರಾಗಿದ್ದು, ಮಂಗಳೂರು ನಗರ ಉತ್ತರ ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರು ಈ ವಿಷಯವನ್ನು ಈ ಹಿಂದೆನೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರು.

ಆಗ ಆಹಾರ ಇಲಾಖೆಯ ಆಯುಕ್ತರಿಂದ ಅದನ್ನು ಸರಿಪಡಿಸುವ ಭರವಸೆ ಸಿಕ್ಕಿತ್ತು. ಜನರ ಈ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಫಾಲೋ ಅಪ್ ಮಾಡುತ್ತಾ ಬಂದಿರುವ ಶಾಸಕ ಡಾ.ಭರತ್ ಶೆಟ್ಟಿಯವರು ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪಡಿತರ ಕಾರ್ಡುಗಳ ಸಮಸ್ಯೆಗೆ ಸಂಬಂಧಪಟ್ಟಂತಹ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೋಟಾ ಶ್ರೀನಿವಾಸ ಪೂಜಾರಿಯವರ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಲು ಮನವಿ ಮಾಡಿದ್ದು, ಇದನ್ನು ಶೀಘ್ರವಾಗಿ ಪರಿಹರಿಸುವುದಾಗಿ ಸಚಿವರು ಭರವಸೆ ನೀಡಿದ್ದಾರೆ‌ ಎಂದು ತಿಳಿಸಿದರು.

- Advertisement -

Join Whatsapp