ಹಳಿಗಳ ಮೇಲೆ ಕುಳಿತು ಪಬ್ ಜಿ ಆಡುತ್ತಿದ್ದವರ ಮೇಲೆ ರೈಲು ಹರಿದು ಇಬ್ಬರು ವಿದ್ಯಾರ್ಥಿಗಳ ಸಾವು

Prasthutha|

ಮಥುರಾ: ಉತ್ತರ ಪ್ರದೇಶದ ಮಥುರಾದ ಲಕ್ಷ್ಮೀನಗರದ ರೈಲು ಹಳಿಗಳ ಮೇಲೆ ಕುಳಿತು ಪಬ್ ಜಿ ಆಟದಲ್ಲಿ ಮಗ್ನರಾಗಿದ್ದ ಇಬ್ಬರ ಮೇಲೆ ರೈಲು ಹರಿದು ಅವರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಭಾನುವಾರ ನಡೆದಿದೆ.

- Advertisement -

ಹತ್ತನೇ ತರಗತಿ ವಿದ್ಯಾರ್ಥಿಗಳಾದ ಕಪಿಲ್‌ (18) ಮತ್ತು ರಾಹುಲ್‌ (16) ಮೃತ ವಿದ್ಯಾರ್ಥಿಗಳು. ಇವರಿಬ್ಬರು ನಿನ್ನೆ ಮಥುರಾ ಕಂಟೋನ್ಮೆಂಟ್ ಹಾಗೂ ರಾಯಾ ರೈಲು ನಿಲ್ದಾಣಗಳ ಮಧ್ಯೆ ಕುಳಿತು ಆಟವಾಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಘಟನಾ ಸ್ಥಳದಲ್ಲಿ ಎರಡು ಮೊಬೈಲ್ ಗಳು ಸಿಕ್ಕಿದ್ದು, ಒಂದು ಮೊಬೈಲ್ ಸಂಪೂರ್ಣವಾಗಿ ಹಾನಿಗೊಂಡಿದ್ದರೆ, ಇನ್ನೊಂದರಲ್ಲಿ ಪಬ್‌ಜಿ ಆಟ ಚಾಲೂ ಸ್ಥಿತಿಯಲ್ಲೇ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

ಪಬ್‌ ಜಿ ಮೊಬೈಲ್ ಗೇಮ್‌ ಅನ್ನು ಭಾರತದಲ್ಲಿ ನಿಷೇಧವಿದ್ದರೂ ಮಕ್ಕಳಿಗೆ ಸುಲಭವಾಗಿ ಗೇಮ್ ದೊರೆಯುತ್ತಿದೆ.



Join Whatsapp