ಉಪ್ಪಿನಂಗಡಿ ಕೊಲೆಯತ್ನ ಪ್ರಕರಣದಲ್ಲಿ ಪೊಲೀಸರು ಹೆಸರಿಸಿದ್ದ ಇಬ್ಬರು SDPI ನಾಯಕರಿಗೆ ಜಾಮೀನು

Prasthutha|

ಉಪ್ಪಿನಂಗಡಿ: ಕೊಲೆಯತ್ನ ಪ್ರಕರಣದಲ್ಲಿ ಪೊಲೀಸರು ಹೆಸರಿಸಿದ್ದ ಇಬ್ಬರು SDPI ನಾಯಕರಿಗೆ ಜಾಮೀನು ಮಂಜೂರಾಗಿದೆ.

- Advertisement -


ಕೊಲೆಯತ್ನ ಪ್ರಕರಣವೊಂದರಲ್ಲಿ ಭಾಗಿಯಾಗಿದ್ದಾರೆಂದು ಉಪ್ಪಿನಂಗಡಿ ಪೊಲೀಸರು SDPI ಮತ್ತು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸ್ಥಳೀಯ ನಾಯಕರಾದ ಝಕರಿಯ ಕೊಡಿಪ್ಪಾಡಿ ಮತ್ತು SDPI ಉಪ್ಪಿನಂಗಡಿ ಬ್ಲಾಕ್ ಅಧ್ಯಕ್ಷ ಮುಸ್ತಫ ಕಡವಿನ ಬಾಗಿಲು ಎಂಬವರನ್ನು ಬಂಧಿಸಿದ್ದರು.


ತನ್ನ ನಾಯಕರ ಅಕ್ರಮ ಬಂಧನದ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು SDPI ಕಾರ್ಯಕರ್ತರು ಪ್ರತಿಭಟಿಸಿದ್ದು, ಪೊಲಿಸರು ಪ್ರತಿಭಟನಾಕಾರರ ಮೇಲೆ ಅಮಾನುಷವಾಗಿ ಲಾಠಿಚಾರ್ಜ್ ಮಾಡಿ ಹಲವರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.

- Advertisement -


ನಂತರ ಶಾಂತಿಯುತ ಪ್ರತಿಭಟನೆ ನಡೆಸಿದ್ದವರ ಮೇಲೆಯೇ ಪ್ರಕರಣ ದಾಖಲಿಸಿ ಸುಮಾರು 20 ಜನರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿತ್ತು.


ಈ ನಡುವೆ ಝಕರಿಯ ಮತ್ತು ಮುಸ್ತಫ ರವರ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿ ಆದೇಶಿಸಿದ್ದಾರೆ. ಆರೋಪಿಗಳ ಪರವಾಗಿ ನ್ಯಾಯವಾದಿಗಳಾದ ಅಶ್ರಫ್ ಕೆ ಅಗ್ನಾಡಿ,ಅಬ್ದುಲ್ ಮಜೀದ್ ಖಾನ್ ಮತ್ತು ಅಬ್ದುಲ್ ರಹಿಮಾನ್ ಹಿರೇಬಂಡಾಡಿ ವಾದಿಸಿದ್ದರು.

Join Whatsapp