ಉಡುಪಿ : ಸಮುದ್ರದಲ್ಲಿ ಬೋಟ್ ಮುಳುಗಡೆ, ಇಬ್ಬರ ರಕ್ಷಣೆ

Prasthutha|

ಕಟಪಾಡಿ : ಮಲ್ಪೆ ಬಂದರಿನಿಂದ ಹೊರಟಿದ್ದ ಮೀನುಗಾರಿಕಾ ಬೋಟೊಂದು ಸಮುದ್ರದಲ್ಲಿ ಮುಳುಗಿದ್ದು, ಇದರಲ್ಲಿದ್ದ ಬಿಹಾರ ಮೂಲದ ಇಬ್ಬರು ಯುವಕರು, ಬೇರೆ ಬೋಟ್ ನೆರವಿನಿಂದ ಸುರಕ್ಷಿತವಾಗಿ ದಡ ಸೇರಿದ್ದಾರೆ ಎಂದು ತಿಳಿದು ಬಂದಿದೆ.

- Advertisement -

ಬೋಟೊಂದು ಕಡಲ ಅಬ್ಬರಕ್ಕೆ ಮುಳುಗಿದ್ದ ಸಂದರ್ಭ ಟ್ಯೂಬ್ ಅಳವಡಿಸಿಕೊಂಡು ಈಜುತ್ತಾ ದಡ ಸೇರುವ ಸಾಹಸ ಮಾಡಿದ ಯುವಕರು ಬೋಟ್ ವೊಂದರ ನೆರವು ಪಡೆದು, ಪ್ರಾಣ ಉಳಿಸಿಕೊಂಡಿದ್ದಾರೆ. ಈ ವೇಳೆ ಒಬ್ಬ ಕಡಲಿನ ತೆರೆಗಳ ಅಬ್ಬರದಲ್ಲಿ ನಾಪತ್ತೆಯಾಗಿದ್ದಾನೆ ಎನ್ನಲಾಗಿದೆ.

ಸ್ಥಳೀಯರ ಮತ್ತು ವಿವಿಧ ಇಲಾಖಾಧಿಕಾರಿಗಳ ಸಹಕಾರದಿಂದ ದಡ ಸೇರಿದ ಯುವಕರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

Join Whatsapp