ಇಸ್ರೇಲ್ ಸೇನೆಯಿಂದ ಆಲ್-ಜಝೀರಾ ಟಿವಿ, ದಿ ಅಸೋಸಿಯೇಟೆಡ್ ಪ್ರೆಸ್ ಕಚೇರಿ ಮೇಲೆ ಏರ್ ಸ್ಟ್ರೈಕ್ | 13 ಮಹಡಿ ಕಟ್ಟಡ ಧ್ವಂಸ

Prasthutha|

ಇಸ್ರೇಲ್ : ಕತಾರ್ ಮೂಲದ ಅಲ್-ಜಜೀರಾ ಟೆಲಿವಿಷನ್ ಮತ್ತು ಅಮೆರಿಕದ ಸುದ್ದಿ ಸಂಸ್ಥೆ ದಿ ಅಸೋಸಿಯೇಟೆಡ್ ಪ್ರೆಸ್ ಗಾಝಾ ಪಟ್ಟಿಯ 13 ಮಹಡಿಗಳ ಕಟ್ಟಡವನ್ನು ಶನಿವಾರ ನಡೆದ ವಾಯುದಾಳಿಯಲ್ಲಿ ಇಸ್ರೇಲ್ ಸೇನೆ ನಾಶಪಡಿಸಿದೆ ಎಂದು ತಿಳಿದು ಬಂದಿದೆ.

- Advertisement -

ಅಲ್-ಜಝೀರಾ ಟೆಲಿವಿಷನ್ ಕಚೇರಿ ಮತ್ತು ಇತರ ಅಂತರರಾಷ್ಟ್ರೀಯ ಪತ್ರಿಕಾ ಕಚೇರಿಗಳನ್ನು ಹೊಂದಿರುವ ಗಾಝಾ ಪಟ್ಟಿಯ ಜಲಾ ಗೋಪುರವನ್ನು ಇಸ್ರೇಲ್ ನಾಶಪಡಿಸಿದೆ ಎಂದು ಅಲ್-ಜಝೀರಾ ತನ್ನ ಅಧೀಕೃತ ಟ್ವಿಟ್ಟರ್ ಖಾತೆಯಲ್ಲಿ ತಿಳಿಸಿದೆ.

Join Whatsapp