ರಾಹುಲ್ ಯಾತ್ರೆ ಬೆಂಬಲಿಸಿದ ಇಬ್ಬರು ರಾಮ ಮಂದಿರ ಟ್ರಸ್ಟಿಗಳು, ಉದ್ದೇಶವೇನೆಂದು ಕೇಳಿದ ಯೋಗಿ

Prasthutha|

ನವದೆಹಲಿ: ಭಾರತ್ ಜೋಡೋ ಯಾತ್ರೆ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ರಾಮ ಮಂದಿರದ ಮುಖ್ಯ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಬೆಂಬಲಿಸಿ ಆಶೀರ್ವದಿಸಿದ ಬೆನ್ನಲ್ಲೇ ಇನ್ನು ಕೆಲವರು ಯಾತ್ರೆಗೆ ಬೆಂಬಲ ನೀಡಿದ್ದಾರೆ.

- Advertisement -


ವಿಹಿಂಪದ ಚಂಪತ್ ರಾಯ್, ರಾಮ ಮಂದಿರ ಟ್ರಸ್ಟಿ ಟ್ರೆಷರರ್ ಹನುಮಾನ್ ಘರಿ ಮಹಂತರಾದ ಸ್ವಾಮಿ ಗೋವಿಂದ್ ದೇವ್ ಗಿರಿ ದೇಶವನ್ನು ಒಗ್ಗೂಡಿಸುವ ಭಾರತ್ ಜೋಡೋ ಯಾತ್ರೆ ಆಶಯವನ್ನು ಶ್ಲಾಘಿಸಿದ್ದಾರೆ. ಅಲ್ಲದೆ ರಾಯ್ ಅವರು ಆರೆಸ್ಸೆಸ್ ಆಗಲಿ ಪ್ರಧಾನಿಯಾಗಲಿ ಯಾತ್ರೆಯನ್ನು ಖಂಡಿಸಿಲ್ಲ ಎಂದೂ ಹೇಳಿದ್ದಾರೆ.


ಉತ್ತರ ಪ್ರದೇಶದ ಮುಖ್ಯಮಂತ್ರಿ ಮುಂಬೈಯಲ್ಲಿದ್ದು, ನಿಮ್ಮ ರಾಜ್ಯದಲ್ಲಿ ಭಾರತ್ ಜೋಡೋ ಯಾತ್ರೆ ಹಾದು ಹೋಗುತ್ತಿರುವ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, ಎಲ್ಲರಿಗೂ ಕಾರ್ಯಕ್ರಮಗಳನ್ನು ಆಯೋಜಿಸುವ ಸ್ವಾತಂತ್ರ್ಯವಿದೆ. ನಾವು ಜನರ ಭಾವನೆಗಳನ್ನು ಗೌರವಿಸಲೇಬೇಕು ಎಂದು ಉತ್ತರಿಸಿದರು.

- Advertisement -


“ಇಲ್ಲಿ ಪ್ರಶ್ನೆ ಏನೆಂದರೆ ಅವರ ಮಹತ್ವಾಕಾಂಕ್ಷೆ ಏನು ಮತ್ತು ಉದ್ದೇಶವೇನು ಎನ್ನುವುದಾಗಿದೆ. ನೀವು ಜೋಡಿಸುವ ವಿಷಯ ಮಾತನಾಡುತ್ತೀರಿ ಎಂದರೆ ಅದು ನಿಮ್ಮ ಕೃತಿಯಲ್ಲಿ ಕಾಣಿಸಬೇಕು. ನಮ್ಮ ಪ್ರಧಾನಿ ಹೇಳಿದಂತೆ ಬಿಜೆಪಿ ದೇಶ ಮೊದಲು, ಪಕ್ಷ ಎರಡನೆಯದು. ಆದರೆ ಬಹಳ ಜನರಿಗೆ ದೇಶಕ್ಕಿಂತ ಪಕ್ಷವೇ ಮುಖ್ಯ. ಇತ್ತೀಚಿನ ತವಾಂಗ್ ಘಟನೆಯನ್ನೇ ನೋಡಿ. ಅದರ ಬಗ್ಗೆ ಹೊರಟ ಹೇಳಿಕೆಗಳನ್ನು ನೋಡಿದರೆ ಅದು ದೇಶ ಜೋಡಿಸುವಂತೆ ಇರಲಿಲ್ಲ; ದೇಶ ಒಡೆಯುವ ಮತ್ತು ವೈರಿಗಳನ್ನು ಪ್ರೋತ್ಸಾಹಿಸುವಂತೆ ಇತ್ತು. ಹೀಗಾಗುವುದನ್ನು ನಾವು ತಪ್ಪಿಸಬೇಕು” ಎಂದು ಅವರು ಹೇಳಿದರು.


ರಾಮ ಮಂದಿರದ ಅರ್ಚಕ ಸತ್ಯೇಂದ್ರ ದಾಸ್ ಮತ್ತು ವಿಶ್ವ ಹಿಂದೂ ಪರಿಷತ್ ನ ಜಾಗತಿಕ ಉಪಾಧ್ಯಕ್ಷ ಚಂಪತ್ ರಾಯ್ ಬೆಂಬಲದ ಹೇಳಿಕೆಯತ್ತ ಗಮನ ಸೆಳೆದಾಗಲೂ, ಯೋಗಿ ಮೇಲಿನಂತೆ ಹೇಳಿದರು ಹಾಗೂ ಅವರ ಉದ್ದೇಶವೇನು ಎಂದು ಪ್ರಶ್ನಿಸಿದರು.


2020ರಲ್ಲಿ ಬಾಬರಿ ಮಸೀದಿ ಉರುಳಿಸಿದ ಆರೋಪ ಹೊತ್ತಿದ್ದ ಆರೋಪದಿಂದ ಬಿಡುಗಡೆ ಆದ 32 ಜನರಲ್ಲಿ ಒಬ್ಬರಾದ ವಿಶ್ವ ಹಿಂದೂ ಪರಿಷತ್ ನ ಜಾಗತಿಕ ಉಪಾಧ್ಯಕ್ಷ, ರಾಮ ಮಂದಿರದ ಒಬ್ಬ ಟ್ರಸ್ಟಿ ಆದ ಚಂಪತ್ ರಾಯ್ ಹೀಗೆ ಹೇಳಿದರು.
“ಯಾರು ಯಾತ್ರೆಯನ್ನು ಟೀಕಿಸಿದರು? ನಾನು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತ. ಆರೆಸ್ಸೆಸ್ ಕಾರ್ಯಕರ್ತರು ಯಾರಾದರೂ ಈ ಯಾತ್ರೆಯನ್ನು ಟೀಕಿಸಿದರೇನು? ಪ್ರಧಾನಿ ಸಹ ಟೀಕಿಸಿಲ್ಲ. ಒಬ್ಬ ಯುವಕ ಈ ದೇಶವನ್ನು ಅರ್ಥ ಮಾಡಿಕೊಳ್ಳಲು ನಡೆದುಕೊಂಡು ಹೋಗುತ್ತಿದ್ದಾನೆ; ಅದು ಸ್ತುತ್ಯಾರ್ಹ. 50ರ ಯುವಕನೊಬ್ಬ ಈ ವ್ಯತಿರಿಕ್ತ ಹವಾಮಾನದಲ್ಲಿ 3,000 ಕಿಲೋಮೀಟರಿನಷ್ಟು ನಡೆಯುವುದನ್ನು ನೋಡಿ ಹೊಗಳಿ. ನಾವಂತೂ ಅದನ್ನು ಹೊಗಳುತ್ತೇವೆ. ಇನ್ನೂ ಹೇಳಬೇಕೆಂದರೆ ಈ ದೇಶದ ಪ್ರತಿಯೊಬ್ಬರು ನಾಡನ್ನು ಅರಿಯಲು ದೇಶದ ಉದ್ದಗಲಕ್ಕೆ ನಡೆಯಬೇಕು” ಎಂದು ರಾಯ್ ಹೇಳಿದರು.


Join Whatsapp